ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಬಜರಂಗದಳದ ಕಾರ್ಯಕರ್ತ ಹರ್ಷ ಎಂಬ ಯುವಕನ ಕೊಲೆಯ ಕುರಿತಾಗಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ನಾವಿಂದು ಒಬ್ಬ ಸಜ್ಜನ ಹಾಗೂ ಹಿಂದುತ್ವಕ್ಕಾಗಿ ಶ್ರಮಿಸಿದ ಯುವಕನನ್ನು ಕಳೆದುಕೊಂಡಿದ್ದೇವೆ, ಆತನನ್ನು ಮುಸಲ್ಮಾನ್ ಗೂಂಡಾಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಯಾವ ದುಶ್ಟ ಶಕ್ತಿಗಳು ಈ ಕೃತ್ಯದ ಹಿಂದಿದೆಯೋ ಅದನ್ನು ತನಿಖೆಯ ಮುಖಾಂತರ ಹೊರಗೆಳೆದು ಅವರನ್ನು ಶಿಕ್ಷಿಸಬೇಕು. ಈ ರೀತಿಯ ಗೂಂಡಾ ವರ್ತನೆಯನ್ನು ಶಿವಮೊಗ್ಗದಲ್ಲಿ ನಡೆಸಲು ಇನ್ನುಮುಂದೆ ಬಿಡುವುದಿಲ್ಲ. ತಪ್ಪಿತಸ್ಥರಿಗೆ ಶೀಘ್ರವೇ ಶಿಕ್ಷೆಯಾಗಲಿದೆ ಎಂದರು. ಈ ಹೇಳಿಕೆ ವ್ಯಾಪಕ ಪರ ವಿರೋಧ ಚರ್ಚೆಗೆ ಕಾರಣವಾಗಿದೆ
ಇದನ್ನೂ ಓದಿ : ಮಲೆನಾಡಿನಲ್ಲಿ ರಾತ್ರೋರಾತ್ರಿ ಭೀಕರ ಮರ್ಡರ್! ಬಜರಂಗದಳ ಕಾರ್ಯಕರ್ತನ ಬರ್ಬರ ಹತ್ಯೆ, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ
ಮುಖ್ಯಮಂತ್ರಿಗಳ ಜೊತೆಗೆ ಹಾಗೂ ರಾಜ್ಯದ ಗೃಹ ಮಂತ್ರಿಗಳ ಜೊತೆಗೆ ಈ ಕುರಿತು ಚರ್ಚಿಸಲಾಗಿದೆ. ಅತೀ ಶೀಘ್ರವಾಗಿ ಆರೋಪಿಗಳನ್ನು ಸೆರೆ ಹಿಡಿಯುವುದಾಗಿ ತಿಳಿಸಿದ್ದಾರೆ ಹಾಗೂ ಪೊಲೀಸರು ಕೂಡ ಈ ಕುರಿತು ಗಂಭೀರ ತನಿಖೆ ನಡೆಸುತ್ತಿದ್ದಾರೆ ಎಂದರು.
ಡಿ.ಕೆ ಶಿವಕುಮಾರ್ ಹೇಳಿಕೆಯಿಂದ ಗೂಂಡಾಗಳು ಪ್ರಚೋದನೆಗೊಳಗಾಗಿದ್ದಾರೆ :
ಡಿಕೆಶಿ ನೀಡಿದ ಬಾವುಟದ ಕುರಿತಾದ ಹೇಳಿಕೆಯಿಂದ ಪ್ರಚೋದನೆಗೊಳಗಾದವರು ಈ ಕೃತ್ಯ ಎಸಗಿದ್ದಾರೆ, ಈ ರೀತಿಯ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಲಿಸಬೇಕು. ಜನರು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.
ಆರೋಪಿಗಳನ್ನು ಗಲ್ಲಿಗೇರಿಸಲು ಗೃಹ ಸಚಿವರಿಗೆ ಕುಟುಂಬಸ್ಥರ ಮನವಿ :
ಈ ಕೃತ್ಯ ಎಸಗಿದ ದುಷ್ಟರನ್ನುಗಲ್ಲಿಗೇರಿಸಿ ನಮಗೆ ನ್ಯಾಯ ದೊರಕಿಸಬೇಕೆಂದು ಕುಟುಂಬಸ್ಥರು ಗೃಹ ಸಚಿವರು ಆಸ್ಪತ್ರೆಗೆ ತೆರಳಿದಾಗ ಮನವಿ ಮಾಡಿದರು. ನನ್ನ ತಮ್ಮ ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವ ದೃಶ್ಯವನ್ನು ವೀಡಿಯೋ ಮಾಡಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದಾರೆ ಮನುಷ್ಯರಿಗೆ ಮನುಷ್ಯತ್ವ ಇಲ್ಲ ನನ್ನ ತಮ್ಮನ ಸಾವಿಗೆ ಬೆಲೆ ಇಲ್ಲದಂತಾಗಿದೆ ಎಂದು ಗೃಹ ಸಚಿವರ ಮುಂದೆ ಹರ್ಷ ಅವರ ಸಹೋದರಿ ನೋವನ್ನು ವ್ಯಕ್ತಪಡಿಸಿದ್ದಾರೆ.

0 Comments