ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿನ್ನಡಿ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ರೈತರೊಬ್ಬರು ಸಾಕಿದ ಹಸುವನ್ನು ತಿಂದು ಹಾಕಿದ ಘಟನೆ ನಡೆದಿದೆ. 

ಮೊದಲೇ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಹಾಗೂ ಕೆಲ ಸಮಯದಲ್ಲಿ ಫಸಲನ್ನು ಸಹ ಕೈಗೆ ಪಡೆಯದ ರೈತ ಅತ್ಯಂತ ಕಷ್ಟದ ಪರಿಸ್ಥಿತಿಯನ್ನು ಎದುರಿಸಿದ್ದಾನೆ ಹೀಗಿರುವಾಗ ತನ್ನ ಜೀವನಾಡಿಯಾಗಿ ತನ್ನ ಜೊತೆಗೆ ಕೃಷಿ ಕೆಲಸದಲ್ಲಿ ಆಸರೆಯಾಗುವ ಹಸುವನ್ನು ಕಳೆದುಕೊಂಡ ರೈತ ಬಿಳಿಯಪ್ಪ ಬೇಸರವನ್ನು ಹೊರಹಾಕಿದ್ದಾರೆ.

ಈ ಭಾಗದಲ್ಲಿ ಅನೇಕ ಸಮಯಗಳಿಂದ ಸಾಕು ಪ್ರಾಣಿಗಳ ಮೇಲೆ ಕ್ರೂರ ಪ್ರಾಣಿಗಳು ದಾಳಿ ನಡೆಸಿ ಅನೇಕ ಹಸುಗಳ ಮಾರಣ ಹೋಮ ನಡೆಸಿದೆ ಇದು ಕೃಷಿಯ ಸಮಯವಾದ್ದರಿಂದ ಅನೇಕ ರೈತರು ತೋಟದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಲಿರುತ್ತಾರೆ ಈ ಸಂದರ್ಭದಲ್ಲಿ ಅವರ ಜೀವಕ್ಕೇನಾದರು ಆದರೆ ಅದರ ಜವಾಬ್ದಾರಿಯಾರದು ಎಂದು ಗ್ರಾಮಸ್ಥರು ಹಾಗೂ ಸ್ಥಳೀಯರು ಪ್ರಶ್ನಿಸಿದ್ದಾರೆ. 

ಇದನ್ನೂ ಓದಿ : ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು; ಅಡಿಕೆ ಕೊಯ್ಯುವ ಸಂದರ್ಭದಲ್ಲಿ ದುರ್ಘಟನೆ

ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಜನ ಪ್ರತಿನಿಧಿಗಳು ನಷ್ಟ ಹೊಂದಿದ ರೈತನಿಗೆ ಸೂಕ್ತ ಪರಿಹಾರ ದೊರಕಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ಈ ರೀತಿಯ ಯಾವುದೇ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಸ್ಥಳೀಯರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

ತನು ಕೊಟ್ಟಿಗೆಹಾರ, ವರದಿಗಾರರು