ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಓರ್ವರನ್ನು ಶೃಂಗೇರಿಯಿಂದ ದಿಢೀರ್ ಟ್ರಾನ್ಫರ್ ಮಾಡಿರುವ ಮಾಹಿತಿ ಸಿಕ್ಕಿದ್ದು ಏಕಾಏಕಿ ಎತ್ತಂಗಡಿ ಮಾಡಿರುವ ಕುರಿತು ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ!
ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಠಾಣೆಗಳಲ್ಲಿ ಸಹ ಹಲವು ಆರೋಪಗಳು ಇದೇ ASI ವಿರುದ್ಧ ಕೇಳಿಬಂದಿದ್ದವು. ಹಾಗೆಯೇ ಕರ್ತವ್ಯದ ವೇಳೆಯಲ್ಲಿ ಸಾರ್ವಜನಿಕರೊಂದಿಗೆ ದರ್ಪ ತೋರುತ್ತಿದ್ದರು ಎಂದು ಸಾರ್ವಜನಿಕ ವಲಯದಲ್ಲಿ ಎಲ್ಲೆಡೆ ಅಸಮಾಧಾನ ಸಹ ಇದ್ದಿತ್ತು.
ಆದರೆ ಈಗ ಏಕಾಏಕಿ ಎತ್ತಂಗಡಿ ಮಾಡಲಾಗಿದ್ದು ಯಾವುದೋ ಕ್ರಿಮಿನಲ್ ಅಪರಾಧದಲ್ಲಿ ಭಾಗಿಯಾಗಿದ್ದು ಅದನ್ನು ಮುಚ್ಚಿ ಹಾಕಲು ಶೃಂಗೇರಿಯಿಂದ ಏಕಾಏಕಿ ಎತ್ತಂಗಡಿ ಮಾಡಲಾಗಿದೆ ಎಂಬ ಆರೋಪವು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಈ ಕುರಿತು ಉನ್ನತ ಪೊಲೀಸ್ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಅನುಮಾನ ಬಗೆಹರಿಸಬೇಕಿದೆ. ಉನ್ನತ ಅಧಿಕಾರಿಯೋರ್ವರು ಸಹ ಶೃಂಗೇರಿಯಲ್ಲಿ ಇದ್ದು ಇದೇ ವಿಚಾರವಾಗಿ ಮಾಹಿತಿ ಕಲೆಹಾಕುತ್ತಿದ್ದಾರೆ ಎಂಬ ಮಾಹಿತಿ ಇದೆ.
ಪೊಲೀಸರು ನ್ಯಾಯದ ವಾರಸುದಾರರು :
ಪೊಲೀಸರ ಮೇಲೆ ಸಾರ್ವಜನಿಕರು ಸಾಕಷ್ಟು ನಂಬಿಕೆ ಹಾಗೂ ಗೌರವ ಇಟ್ಟುಕೊಂಡಿರುತ್ತಾರೆ. ಅನ್ಯಾಯವಾದಾಗ ನ್ಯಾಯ ದೊರಕಿಸುತ್ತಾರೆ ಎಂಬ ಅಛಲ ವಿಶ್ವಾಸದೊಂದಿಗೆ ನ್ಯಾಯದ ವಾರಸುದಾರರು ಎಂದೇ ನಂಬುತ್ತಾರೆ. ಆದಕಾರಣ ಪೊಲೀಸರ ವಿರುದ್ಧ ಯಾವುದೇ ಆರೋಪ, ಅನುಮಾನ ಕಂಡುಬಂದಲ್ಲಿ ಅದನ್ನು ಬಗೆಹರಿಸಿ ಜನರಿಗೆ ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶ ನೀಡಬೇಕು.
ಸಾಕಷ್ಟು ಪೊಲೀಸರು ಸಮಾಜದ ಭದ್ರತೆಗಾಗಿ ಹಗಲಿರುಳು ಶ್ರಮಿಸುತ್ತಾರೆ, ಅಂತವರ ಶ್ರಮ ಕೆಲವು ಕಿಡಿಗೇಡಿಗಳು ಮಾಡುವ ಕೃತ್ಯಗಳಿಂದ ವ್ಯರ್ಥವಾಗಬಾರದು.
"ಇದುವರೆಗೂ ಪೊಲೀಸ್ ಇಲಾಖೆಯಿಂದ ಈ ಕುರಿತು ಯಾವುದೇ ಮಾಹಿತಿ ನೀಡಿಲ್ಲ, ಅಧೀಕೃತ ಮಾಹಿತಿ ನಂತರ ಸಂಪೂರ್ಣ ವಿವರದೊಂದಿಗೆ ಸುದ್ದಿ ಪ್ರಕಟಿಸಲಾಗುವುದು".

0 Comments