ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಮೂರು ದಿನಗಳ ಹಿಂದೆ ನಡುರಸ್ತೆಯಲ್ಲಿ ಬರ್ಬರವಾಗಿ ಹತ್ಯೆಗೀಡಾದ ಹರ್ಷ ಎಂಬ ಬಜರಂಗದಳ ಕಾರ್ಯಕರ್ತನ ಸಾವಿಗೆ ವೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.
ಹರ್ಷನ ಸಾವಿನ ನಂತರ ಆತನ ಕುಟುಂಬಕ್ಕೆ ನೆರವಾಗುವ ದೃಷ್ಟಿಯಿಂದ ರಾಜ್ಯಾದ್ಯಂತ ಧನ ಸಹಾಯ ಮಾಡಲು ಕೋರಿ ಹಿಂದೂಪರ ಕಾರ್ಯಕರ್ತರು ಅಭಿಯಾನ ಕೈಗೊಂಡಿದ್ದರು. ಅಂತೆಯೇ ಸಹಾಯ ಹಸ್ತ ಚಾಚಿದ ಜನರು ಇದೀಗ ಆತನ ತಾಯಿಯ ಖಾತೆಗೆ 65 ಲಕ್ಷಕ್ಕೂ ಅಧಿಕ ಹಣವನ್ನು (23.02.2022 ರ ಸಂಜೆ 4.30 ರ ವರೆಗೆ) ಹಾಕುವುದರ ಮೂಲಕ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ದೊರಕಿದೆ.
ಇದನ್ನೂ ಓದಿ : ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ಸೆರೆ ಹಿಡಿದ ಪೊಲೀಸರು ; ನಗದು ವಶಕ್ಕೆ
ಕುಟುಂಬಕ್ಕೆ ಆಸರೆಯಾಗಿ ತಂದೆ ತಾಯಿಯರ ನೋವು ನೀಗಲು ಜೀವಂತವಾಗಿರಬೇಕಿದ್ದ ಮಗ ದುಷ್ಕರ್ಮಿಗಳ ಸಂಚಿಗೆ ಬಲಿಯಾಗಿದ್ದಾನೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯದ ಅನೇಕ ಭಾಗಗಳಲ್ಲಿ ನಿರಂತರವಾಗಿ ಹಿಂದೂ ಸಂಘಟನೆಗಳು ಇನ್ನೂ ಪ್ರತಿಭಟನೆ ನಡೆಸುತ್ತಲೇ ಇದೆ. ಕೊಲೆಗೈದ ಆರೋಪಿಗಳ ಮೇಲೆ ಕಠಿಣ ಶಿಕ್ಷೆ ಜಾರಿಯಾಗಬೇಕು ಸರ್ಕಾರ ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಹಿಂದೂ ಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹರ್ಷನ ಕುಟುಂಬಕ್ಕೆ ನೆರವಾಗುವ ಸಲುವಾಗಿ ಧನ ಸಹಾಯ ಮಾಡುವಂತೆ ಕರೆ ನೀಡಿದ್ದರು. ಒಟ್ಟಾರೆ ಯುವಕನ ಸಾವಿಗೆ ಒಂದೆಡೆ ಆಕ್ರೋಶವ್ಯಕ್ತವಾಗಿದ್ದು ಇನ್ನೊಂದೆಡೆ ಕುಟುಂಬಕ್ಕೆ ಧನಸಹಾಯ ದೊರಕಿದೆ.

0 Comments