ಹಾಸನ : (ನ್ಯೂಸ್ ಮಲ್ನಾಡ್ ವರದಿ) ವಸತಿ ಯೋಜನೆಯ ಅಡಿಯಲ್ಲಿ ವಸತಿ ರಹಿತರಿಗೆ ಆಶ್ರಯ ಕಲ್ಪಿಸುವ ಸಲುವಾಗಿ ಹಾಸನ ಜಿಲ್ಲಾಡಳಿತವು ಅರ್ಜಿ ಆಹ್ವಾನಿಸಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ದಿ ನಿಗಮದಡಿ ಅರ್ಜಿ ಆಹ್ವಾನಿಸಿದ್ದು 2021-22 ನೆಯ ಸಾಲಿನ ಅಲೆಮಾರಿ, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪಂಗಡಗಳಿಗೆ, ಮಾಜಿ ದೇವದಾಸಿಯರಿಗೆ ಅಂತರ್ಜಾತಿ ವಿವಾಹ ಆದವರಿಗೆ, ವಿಧವೆಯರಿಗೆ ಮೀನುಗಾರರಿಗೆ, ದೌರ್ಜನ್ಯಕ್ಕೊಳಗಾದವರಿಗೆ ಮನೆ ನಿರ್ಮಾಣ ಮಾಡಿಕೊಡಲು ಉಚಿತ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇದನ್ನೂ ಓದಿ :ಕೇಸರಿ-ಹಿಜಾಬ್ ವಿವಾದ ಶೀಘ್ರವಾಗಿ ಪರಿಹರಿಸಿ; ವಿಶ್ವ ಹಿಂದೂ ಪರಿಷತ್ ಆಗ್ರಹ
ಸಾರ್ವಜನಿಕರು ಹಾಗೂ ಅರ್ಹರು ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹಾಸನ ಜಿಲ್ಲಾಧಿಕಾರಿಗಳಾದ ಆರ್ ಗಿರೀಶ್ ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವವರು 18 ವರ್ಷ ಮೇಲ್ಪಟ್ಟವರಾಗಿರಬೇಕು, ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯಕ್ಕೆ ಸೇರಿರಬೇಕು ಹಾಗೂ ಹದಿನೈದು ವರ್ಷಗಳಿಂದ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು ಎಂಬ ಇನ್ನಿತರ ಮಾನದಂಡಗಳನ್ನು ಹೊಂದಿದೆ. ಅರ್ಹರು ಈ ಯೋಜನೆಯ ಫಲಾನಭವಿಗಳಾಗುವ ಮೂಲಕ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು.

0 Comments