ಹಾಸನ : (ನ್ಯೂಸ್ ಮಲ್ನಾಡ್ ವರದಿ) ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾದ ದುರ್ಘಟನೆ ಬೆಳಕಿಗೆ ಬಂದಿದೆ. 

ಹಾಸನದ ಹೇಮಾವತಿ ನಗರದಲ್ಲಿ ಗಂಡ ಹೆಂಡತಿ ಹಾಗೂ ಮಗ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣಗಳೇನು ಎಂದು ಈ ವರೆಗೂ ತಿಳಿದು ಬಂದಿಲ್ಲ. ಮೃತರನ್ನು ಸತ್ಯಪ್ರಕಾಶ್, ಅನ್ನಪೂರ್ಣ ಹಾಗೂ ಗೌರವ್ ಎಂದು ಗುರುತಿಸಲಾಗಿದೆ.  

ಇದನ್ನೂ ಓದಿ : ಜಾತ್ರೆ ಇನ್ನಿತರ ಜನಸಂದಣಿ ಪ್ರದೇಶಗಳಲ್ಲಿ ಸರಗಳ್ಳತನ ನಡೆಸುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳಿಯರು ಅಂದರ್

ಈ ಹಿಂದೆ ಸೀಮೇಎಣ್ಣೆ ವ್ಯಾಪಾರ ಮಾಡಿಕೊಂಡಿದ್ದ ಸತ್ಯಪ್ರಕಾಶ್ ಅವರು ಕೆಲ ತಿಂಗಳ ಹಿಂದೆ ಪೆಟ್ರೋಲ್ ಬಂಕ್ ಗುತ್ತಿಗೆಗೆ ಪಡೆದಿದ್ದರು. ಈ ಕಾರಣಕ್ಕಾಗಿ ಹಲವೆಡೆ ಸಾಲ ಮಾಡಿದ್ದರು ಆದರೆ ಉತ್ತಮ ಮಟ್ಟದಲ್ಲಿ ಹೂಡಿಕೆ ಮಾಡಿದ ಹಣ ವಾಪಸ್ ದೊರೆಯದ ಕಾರಣ ನಷ್ಟ ಹೊಂದಿದ್ದರು ಎನ್ನಲಾಗಿದೆ. 

ಪೊಲೀಸರು ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದು ಘಟನೆಗೆ ಕಾರಣಗಳೇನಿರಬಹುದು ಎಂದು ತನಿಖೆ ನಡೆಸುತ್ತಿದ್ದಾರೆ.