ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಏಳು ಮಂದಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 

ಚಿಕ್ಕಮಗಳೂರು ತಾಲೂಕಿನ ಕೋಟೆವೂರು ಗ್ರಾಮದಲ್ಲಿ ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದ ಏಳು ಮಂದಿಯನ್ನು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಬಂಧಿತರಲ್ಲಿ ಚಿಕ್ಕಮಗಳೂರು ಯೂತ್ ಕಾಂಗ್ರೆಸ್ ನ ಉಪಾಧ್ಯಕ್ಷ ರಹೀಲ್ ಷರೀಫ್ ಕೂಡ ಓರ್ವ ಎಂಬ ಮಾಹಿತಿ ಲಭ್ಯವಾಗಿದೆ. 

ಚಿಕ್ಕಮಗಳೂರಿನ ತೇಜೇಶ್ ಸಿ ಆರ್, ರಾಹೀಲ್ ಷರೀಫ್, ಮಂಜುನಾಥ್ ಡಿ.ಆರ್, ಮಹೇಶ್, ಮೊಹಮ್ಮದ್ ಫಿರೋಜ್, ಪೂರ್ಣೆಷ್ ಕೆ.ಸಿ, ಮೊಹಮ್ಮದ್ ಸಲೀಂ ಬಂಧಿತರು. ಬಂಧಿತರಿಂದ 17,330 ರೂಪಾಯಿ ನಗದು, ಮೊಬೈಲ್ ಫೋನ್ ಸೇರಿದಂತೆ ಎರಡು ಕಾರನ್ನು ಪೊಲೀಸರು ವಶಪಡೆದಿದ್ದಾರೆ.

ಇದನ್ನೂ ಓದಿ : ಮರದ ರೆಂಬೆಬಿದ್ದು ವ್ಯಕ್ತಿ ಸಾವು ; ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ

ಇಸ್ಪೀಟ್ ಒಳಗೊಂಡಂತೆ ಇನ್ನಿತರ ಜೂಜಾಟಗಳಲ್ಲಿ ಭಾಗಿಯಾಗುವುದು ಅಕ್ರಮ ಎಂದು ತಿಳಿದಿದ್ದರೂ ಈ ರೀತಿಯ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಹಣ ಕಳೆದುಕೊಳ್ಳುವ ಕಾರ್ಯವನ್ನು ಸಾರ್ವಜನಿಕರು ಮಾಡಬಾರದು, ಒಂದು ವೇಳೆ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾದರೆ ಕಾನೂನಿನ ಅಡಿಯಲ್ಲಿ ಸೂಕ್ತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯು ಸಿಪಿಐ ಆಲ್ದೂರು ವೃತ್ತ ಇವರ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿ ಈ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.