ಕಳಸ : (ನ್ಯೂಸ್ ಮಲ್ನಾಡ್ ವರದಿ) ಮುಸ್ಲಿಂ ಸಮುದಾಯದ ಯುವಕ ಹಾಗೂ ಹಿಂದೂ ಯುವತಿಯು ಮಧ್ಯರಾತ್ರಿ ಒಂದು ಗಂಟೆಯ ವೇಳೆಗೆ ಒಮಿನಿ ಕಾರ್ ಒಂದರಲ್ಲಿ ಸ್ಥಳೀಯರಿಗೆ ಸಿಕ್ಕಿಬಿದ್ದ ಘಟನೆ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಅಂಬೇಡ್ಕರ್ ವಸತಿ ಶಾಲೆಯಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶೃಂಗೇರಿ ಮೂಲದ ಯುವತಿಯು ಮಧ್ಯರಾತ್ರಿಯ ವೇಳೆಗೆ ತೀರ್ಥಹಳ್ಳಿ ಮೂಲದ ಅಪ್ವಾನ್ ಬಿನ್ ವಜೀರ್ ಅಹ್ಮದ್ ಎಂಬ ಯುವಕನ ಜೊತೆಗೆ ಕಾರಿನಲ್ಲಿರುವಾಗ ಸ್ಥಳೀಯರಿಗೆ ಸೆರೆ ಸಿಕ್ಕಿದ್ದಾರೆ. ಕಳಸದಿಂದ ಬಾಳೆಹೊಳೆ ಕಡೆ ಹೋಗುವ ಮಾರ್ಗಮಧ್ಯೆ ನಡುರಾತ್ರಿ 1:30ರ ಸುಮಾರಿಗೆ ಓಮ್ನಿ ಕಾರು ನಿಂತಿದ್ದನ್ನು ಗಮನಿಸಿದ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಮಲೆನಾಡು ಭಾಗದಲ್ಲಿ ಕಳೆದ ಒಂದು ವಾರದಿಂದ ಚಳಿಯ ವಾತಾವರಣವಿದ್ದು ಜೋಡಿಗಳು ಹಸಿ-ಬಿಸಿ ಚರ್ಚೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ : ಇಸ್ಪೀಟ್ ಅಡ್ಡೆ ಮೇಲೆ ದಾಳಿ, ಚಿಕ್ಕಮಗಳೂರು ಜಿಲ್ಲಾ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಬಂಧನ

ಇಬ್ಬರೂ ಈ ಹಿಂದೆಯೇ ಸ್ಟಾರ್ ಮೇಕರ್ ಎಂಬ ಯ್ಯಾಪ್ ನ ಮೂಲಕ ಪರಿಚಯಗೊಂಡು ಪ್ರೇಮಿಸಿ ಇದೀಗ ಮದುವೆಗೂ ಸಿದ್ಧರಾಗಿದ್ದರು ಎಂಬ ಮಾಹಿತಿ ದೊರೆತಿದೆ. ರಾತ್ರಿ ಒಂದು ಗಂಟೆಯ ಸಮಯದಲ್ಲಿ ಯಾವ ರೀತಿಯ ಸಂಭಾಷಣೆಗೆ ತೊಡಗಿದ್ದರೋ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. 

ಈ ಕುರಿತು ಕಳಸ ಪೊಲೀಸ್ ಠಾಣೆಯಲ್ಲಿ ಅಫ್ವಾನ್ ದೂರು ನೀಡಿದ್ದು, ತನ್ನ ಗೆಳತಿಯೊಂದಿಗೆ ರಾತ್ರಿ 1.30ರ ಸಮಯದಲ್ಲಿ ಮಾತುಕತೆಯಲ್ಲಿ ತೊಡಗಿದ್ದಾಗ ತನ್ನ ಮೇಲೆ ಹಲ್ಲೆ ಮಾಡಿರುವುದಾಗಿ ಬಜರಂಗದಳದ ಮೇಲೆ ಆರೋಪ ಹೊರಿಸಿದ್ದಾನೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಹೆಚ್ಚಿನ ಮಾಹಿತಿಗಳು ತನಿಖೆ ಮುಗಿದ ಬಳಿಕವಷ್ಟೇ ತಿಳಿಯಬೇಕಿದೆ.