ಕಳಸ : (ನ್ಯೂಸ್ ಮಲ್ನಾಡ್ ವರದಿ) ಜೈನ ಧರ್ಮಿಯರ ಭಾವನೆಗಳಿಗೆ ಹಾಗೂ ಮನಸ್ಸಿಗೆ ನೋವಾಗುವಂತೆ ಕೆಲ ವ್ಯಕ್ತಿಗಳು ಜೈನ ಧರ್ಮದ ಕುರಿತಾಗಿ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಜೈನ ಧರ್ಮೀಯರು ಕಳಸ ಹಾಗೂ ಕುದುರೆಮುಖ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ : ನೇಣುಬಿಗಿದ ಸ್ಥಿತಿಯಲ್ಲಿ ಅಪ್ರಾಪ್ತ ಯುವತಿಯ ಶವ ಪತ್ತೆ; ದೂರು ದಾಖಲಿಸಿದ ಕುಟುಂಬಸ್ಥರು

ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಚರ್ಚೆ ನಡೆಸುವ ಸಂದರ್ಭದಲ್ಲಿ ನ್ಯೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಆಯುಬ್ ಖಾನ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಹಾಗೂ ಬಿಗ್ ಬಾಸ್ ಪ್ರಥಮ್ ಸಾಮಾಜಿಕ ಜಾಲತಾಣಗಳಲ್ಲಿ ಜೈನ ಸಮುದಾಯದ ಭಗವಾನ್ ಬಾಹುಬಲಿ ಸ್ವಾಮಿಯ ಕುರಿತಾಗಿ ಅವಹೇಳನಕಾರಿ ಮತ್ತು ನಿಂದಿಸಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಜೈನ್ ಮಿಲನ್ ವತಿಯಿಂದ ಹಾಗೂ ಕಳಸ ಸೀಮೆ ಬಸದಿ ಕಮಿಟಿ ಹಾಗೂ ಕಳಸ ಜೈನ್ ಮಿಲನ್ ಮತ್ತು ಜೈನ ಸಮುದಾಯದವರು ಸೇರಿ ಕಳಸ ಹಾಗೂ ಕುದುರೆಮುಖ ಠಾಣೆಗಳಿಗೆ ದೂರು ನೀಡಿದ್ದಾರೆ.

ಅವಹೇಳನಕಾರಿ ಹೇಳಿಕೆ ನೀಡಿದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಈ ವ್ಯಕ್ತಿಗಳ ಹೇಳಿಕೆಯಿಂದ ಜೈನ ಸಮುದಾಯದ ಹಾಗೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಆದಕಾರಣ ಅಶ್ಲೀಲ ಹೇಳಿಕೆ ನೀಡಿದವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕೆಂದು ದೂರು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಆರ್.ಕೆ ಬ್ರಹ್ಮದೇವ, ಶ್ರೇಣಿಕ್ ಮರಸಣಿಗೆ,ಪ್ರದೀಪ್ ಕಡೆಪಾಲ್,ತೇಜಸ್ ಜೈನ್ ಹಾಗೂ ಕಳಸ ತಾಲೂಕಿನ 9 ಬಸದಿಗಳ ಜೈನ ಧರ್ಮೀಯರು ಉಪಸ್ಥಿತರಿದ್ದರು.