ಹರಿಹರಪುರ : (ನ್ಯೂಸ್ ಮಲ್ನಾಡ್ ವರದಿ) ಹರಿಹರಪುರದಲ್ಲಿರುವ ಮೆಸ್ಕಾಂ ಪಾಲನಾ ಮತ್ತು ನಿರ್ವಹಣಾ ಕಛೇರಿಯನ್ನು ಈಗಿರುವ ಸ್ಥಳದಿಂದ ಬೇರೆಡೆಗೆ ಸ್ಥಳಾಂತರ ಮಾಡಬಾರದೆಂದು ಆಗ್ರಹಿಸಿ ಇಂಧನ ಸಚಿವರಿಗೆ ಹರಿಹರಪುರದ ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಅಕ್ರಮವಾಗಿ ಮದ್ಯ ಸೇವನೆ ಮಾಡಲು ಸ್ಥಳ ನೀಡಿದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹರಿಹರಪುರ ಹೋಬಳಿಯ ಕೊಪ್ಪ ವಿಭಾಗದ ವಿದ್ಯುತ್ ಪಾಲನಾ ಹಾಗೂ ನಿರ್ವಹಣಾ ಮೆಸ್ಕಾಂ ಕಛೇರಿಯು ಪ್ರಸ್ತುತ ಉತ್ತಮವಾದ ಸ್ಥಳದಲ್ಲಿದೆ, ಈ ಕಛೇರಿಗೆ ತೆರಳಿ ಬಿಲ್ ನ ಮೊತ್ತ ಪಾವತಿಸಲು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ, ಅದಲ್ಲದೆ ಈ ಕಛೇರಿಯು ಹರಿಹರಪುರದ ನಾಡಕಛೇರಿ ಹಾಗೂ ಇನ್ನೂ ಅನೇಕ ಸರ್ಕಾರಿ ಕಛೇರಿಗಳಿಗೆ ಸಮೀಪವಿರುವುದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗುತ್ತದೆ ಈ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸಲೆ ಬೇಕಾದ ಅನಿವಾರ್ಯತೆಗಳು ಇಲ್ಲದ ಕಾರಣ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ಕಛೇರಿಯನ್ನು ಸ್ಥಳಾಂತರಿಸಲು ಬಿಡಬಾರದೆಂದು ಹರಿಹರಪುರದ ಸ್ಥಳೀಯರು ಒತ್ತಾಯಿಸಿದ್ದಾರೆ.
ಈಗಿರುವ ಕಛೇರಿಗಿಂತ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಹಾಗೂ ವಿಶಾಲವಾಗಿರುವ ಇನ್ನೊಂದು ಕಟ್ಟಡಕ್ಕೆ ತೆರಳುವ ಸಲುವಾಗಿ ಆ ಕುರಿತು ಪ್ರಪೋಸಲ್ ಮುಂದಿಡಲಾಗಿದೆ. ಟ್ರಾನ್ಸ್ಫಾರ್ಮರ್ ಮುಂತಾದ ಸಾಮಗ್ರಿಗಳನ್ನಿಡಲು ಅನುಕೂಲವಾಗುವಂತ ಸುರಕ್ಷಿತವಾದ ಜಾಗ ಹೊಸ ಕಟ್ಟಡದಲ್ಲಿದೆ ಮೂಲಭೂತವಾಗಿರಬೇಕಾದ ಶೌಚಾಲಯವೂ ಈಗಿರುವ ಕಛೇರಿಯಲ್ಲಿರದ ಕಾರಣ ಈ ಕುರಿತು ಚಿಂತಿಸಲಾಗಿದೆ. - ಸಿದ್ದೇಶ್ ಇ.ಇ ಕೊಪ್ಪ
ಈ ಕುರಿತಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಕಟ್ಟಡವನ್ನು ಸ್ಥಳಾಂತರಿಸಲು ಅವಕಾಶ ನೀಡಬಾರದೆಂದು ಇಂಧನ ಸಚಿವರಾದ ಶ್ರೀಯುತ ವಿ.ಸುನಿಲ್ ಕುಮಾರ್ ಅವರಿಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಈಗಿರುವ ಕಛೇರಿಯು ಸಾರ್ವಜನಿಕರಿಗೆ ಅತ್ಯಂತ ಅನುಕೂಲವಾಗುವ ಸ್ಥಳದಲ್ಲಿದೆ ಇದರ ಅಕ್ಕ ಪಕ್ಕದಲ್ಲಿಯೇ ಹಲವಾರು ಸರ್ಕಾರಿ ಕಛೇರಿಗಳು ಇರುವುದರಿಂದ ಸಾರ್ವಜನಿಕರಿಗೆ ಬಹಳ ಉಪಯುಕ್ತವಾಗುತ್ತದೆ. ಕಛೇರಿ ಬೇರೆಡೆಗೆ ಸ್ಥಳಾಂತರಗೊಂಡರೆ ಹಣ ಪಾವತಿಸಲು ಕಷ್ಟಕರವಾಗುತ್ತದೆ - ಶಿವಶಂಕರ್ ಭಟ್, ಸ್ಥಳೀಯರು

0 Comments