ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಯುವ ಒಕ್ಕಲಿಗರ ವೇದಿಕೆ ಶೃಂಗೇರಿ ವತಿಯಿಂದ ಶೃಂಗೇರಿ ಪಟ್ಟಣದ ಕನ್ನಡ ಭವನದಲ್ಲಿ ಶೃಂಗೇರಿ ತಾಲ್ಲೂಕು ಯುವ ಒಕ್ಕಲಿಗರ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆಯು ಹಾಲಿ ಅಧ್ಯಕ್ಷರಾದ ರಾಜೇಶ್ ದ್ಯಾವಂಟು ಅವರ ನೇತೃತ್ವದಲ್ಲಿ ನಡೆಯಿತು.
ನೂತನ ಪದಾದಿಕಾರಿಗಳಾಗಿ ಆಯ್ಕೆಯಾದ ಪಟ್ಟಿ ಇಂತಿವೆ.
ತಾಲೂಕು ಯುವ ಒಕ್ಕಲಿಗರ ವೇದಿಕೆ ಅಧ್ಯಕ್ಷರಾಗಿ ಶಿರಾಂಕ ಹೆಗಡೆ
ಉಪಾಧ್ಯಕ್ಷರಾಗಿ ಸಚೀಂದ್ರ ಹೊಸ್ತೋಟ ಹಾಗೂ
ಅಭಿಲಾಶ್ ಹೆಗ್ಡೆ ಕೊಚ್ಚವಳ್ಳಿ
ಕಾರ್ಯದರ್ಶಿಯಾಗಿ ಮದನ್ ತೆಕ್ಕೂರು
ಇದನ್ನೂ ಓದಿ : ಕೊಪ್ಪದ ಹೆಸರಾಂತ ಜೆಎಂಜೆ ಚಿತ್ರಮಂದಿರಕ್ಕೆ 48 ನೇ ವಸಂತ ; ಚಿತ್ರಾಭಿಮಾನಿಗಳಿಂದ ತುಂಬು ಹೃದಯದ ಹಾರೈಕೆ
ಸಂಘಟನಾ ಕಾರ್ಯದರ್ಶಿಯಾಗಿ: ಪ್ರಜ್ವಲ್ ಕಿಗ್ಗ
ಖಜಾಂಚಿಯಾಗಿ : ಸುಚನ್ ಮಂಡಗದ್ದೆ ಆಯ್ಕೆಯಾಗಿದ್ದಾರೆ.
ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಯುವ ಒಕ್ಕಲಿಗರ ವೇದಿಕೆ ಕಾರ್ಯ ನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಹಿರಿಯರ ಮಾರ್ಗದರ್ಶನದೊಂದಿಗೆ ಸಾಕಷ್ಟು ಕೆಲಸಗಳನ್ನು ಮಾಡುವ ಯೋಜನೆ ಇರುವುದಾಗಿ ಪದಾಧಿಕಾರಿಗಳು ತಿಳಿಸಿದರು.

0 Comments