ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ಈ ಕೂಡಲೇ ನಿಷೇಧಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಚಿಕ್ಕಮಗಳೂರಿನಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶಾಲಾ ಕಾಲೇಜುಗಳ ವಾತಾವರಣವನ್ನು ಕೆಡಿಸುವ ಸಲುವಾಗಿ ಹಿಜಾಬ್ ಗೆ ಅನುಮತಿ ಇಲ್ಲದೆ ಇದ್ದರೂ ಕೂಡ ಧರಿಸಿಕೊಂಡು ಬರಲಾಗುತ್ತಿದೆ ಈ ಮೂಲಕ ಅಲ್ಲಿನ ಪರಿಸ್ಥಿತಿಯನ್ನು ಇಕ್ಕಟ್ಟಿಗೆ ಸಿಲುಕಿಸಲಾಗುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ : ಬಾಲಕಿ ಮೇಲೆ ಅತ್ಯಾಚಾರ ; ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು
ಎಲ್ಲೆಡೆಯೂ ಸಮಾನತೆಯಿಂದ ಸಮವಸ್ತ್ರವನ್ನು ಧರಿಸಿಕೊಂಡು ಕಾಲೇಜಿಗೆ ಆಗಮಿಸಬೇಕಾಗಿ ವಿದ್ಯಾರ್ಥಿಗಳು ಧರ್ಮಾಚರಣೆಯನ್ನು ಕಾಲೇಜಿನಲ್ಲಿ ಮಾಡುವುದು ಸಮಂಜಸವಲ್ಲ, ವಿದ್ಯಾರ್ಥಿಗಳನ್ನು ಒಡೆದು ಧಾರ್ಮಿಕ ಆಚರಣೆಗಳನ್ನು ಶಾಲಾ-ಕಾಲೇಜುಗಳಲ್ಲಿ ನಡೆಸುವುದು ಸರಿಯಲ್ಲ ಎಂದರು.
ರಾಜ್ಯದಾದ್ಯಂತ ಭುಗಿಲೆದ್ದಿರುವ ಹಿಜಾಬ್ ವಿವಾದ ಅಂತ್ಯಕಾಣಬೇಕು ಈ ನಿಟ್ಟಿನಲ್ಲಿ ಎಲ್ಲರೂ ಗಮನಹರಿಸಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಬೇಕು ಅಮಾಯಕ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬರುವುದೇ ಆದರೆ ನಮ್ಮ ಪರಂಪರೆಯೂ ಬೇರೆಯೇ ಇದೆ ಹಿಂದೂ ವಿದ್ಯಾರ್ಥಿಗಳು ಕೂಡ ಶಾಲು ಹಾಗೂ ಪಂಚೆಯನ್ನು ಧರಿಸಿಕೊಂಡು ಕಾಲೇಜಿಗೆ ಬರಲು ಅನುಮತಿಸಬೇಕಾಗುತ್ತದೆ ಎಂದರು.

0 Comments