ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಮಹಿಳೆಯೋರ್ವರು ಹೆರಿಗೆಯ ಸಮಯದಲ್ಲಿ ತೀವ್ರ ಆರೋಗ್ಯ ಸಮಸ್ಯೆಗೀಡಾಗಿದ್ದು ಅವರ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಹಾಯ ಮಾಡಬೇಕೆಂದು ಕೋರಿ ಮಹಿಳೆಯ ಸಂಬಂಧಿಕರು ಮನವಿ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಆರ್ಡಿ ಕೊಪ್ಪ ನಿವಾಸಿ ಸಂಗೀತಾ ಎಂಬ ಮಹಿಳೆಯುಒಂಬತ್ತು ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು, ಹೆರಿಗೆಯ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ ಉಂಟಾಗಿ ಕೊಪ್ಪದಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲು ಮಾಡಲು ವೈದ್ಯರು ಸೂಚನೆ ನೀಡಿದ್ದರು ಅವರು ಸೂಚಿಸಿದಂತೆ ಸಂಗೀತಾ ಅವರನ್ನು ಪ್ರಸ್ತುತ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ : ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದ 09 ಮಂದಿ ಸೆರೆ ; ನಗದು ಹಾಗೂ ಬೈಕ್ ವಶಪಡೆದ ಪೊಲೀಸರು
ಸಂಗೀತಾ ಅವರ ಎರಡೂ ಕಿಡ್ನಿ ವೈಫಲ್ಯಗೊಂಡಿದ್ದು ಹೃದಯ ಸಂಬಂಧಿ ಖಾಯಿಲೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಸ್ತುತ ಸಂಗೀತಾ ಅವರು ತೀವ್ರನಿಘಾ ಘಟಕದಲ್ಲಿದ್ದು ಪ್ರತಿದಿನ ಡಯಾಲಿಸಿಸ್ ನ ಅಗತ್ಯವಿರುತ್ತದೆ ಈಗಾಗಲೇ ಒಂದು ಲಕ್ಷದ ಎಂಬತ್ತು ಸಾವಿರ ಹಣ ಪಾವತಿಸಿದ್ದು ಇನ್ನೂ ಒಂದು ಲಕ್ಷಕ್ಕಿಂತ ಅಧಿಕಹಣದ ಅವಶ್ಯಕತೆ ಇದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ ಹಾಗೂ ದಾನಿಗಳು ನೆರವಿನ ಹಸ್ತ ಚಾಚಬೇಕೆಂದು ಕುಟುಂಬಸ್ಥರು ಹಾಗೂ ಅಲ್ಲಿನ ಸ್ಥಳೀಯರು ಕೋರಿದ್ದಾರೆ.
ಹಣ ಹಾಕಲಿಚ್ಚಿಸುವವರು ಸಂಗೀತ ಅವರ ಅಣ್ಣ ಸಂತೋಷ್ ಅವರ ಈ ಕೆಳಗಿನ ಗೂಗಲ್ ಪೇ ಅಥವಾ ಫೋನ್ ಪೇ ಖಾತೆಗೆ ಹಣ ಹಾಕಬಹುದು
8431989075
ಬ್ಯಾಂಕ್ ಅಕೌಂಟ್ ನ ಮಾಹಿತಿ ಈ ಕೆಳಗಿನಂತಿದೆ :
ಕರ್ನಾಟಕ ಬ್ಯಾಂಕ್ ನಾರ್ವೆ ಶಾಖೆ
ಖಾತೆ ಸಂಖ್ಯೆ : 5362500100687901
IFSC NO : KARB0000536

0 Comments