ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ ) ಮಧ್ಯ ವಯಸ್ಕ ಯುವಕರನ್ನು ಹಾಗೂ ಹಣಹೊಂದಿದ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ ಹನಿ ಟ್ರ್ಯಾಪ್ ಮಾಡುತ್ತಿದ್ದ ತಂಡವೊಂದನ್ನು ಕಾರ್ಯಾಚರಣೆಯ ಮೂಲಕ ಪೊಲೀಸರು ಬಂಧಿಸಿದ್ದಾರೆ.
ಖಾಯಂ ಉಪನ್ಯಾಸಕ ಹುದ್ದೆಯ ಉದ್ಯೋಗ ನೀಡುವುದಾಗಿ ನಂಬಿಸಿ ಯುವಕನನ್ನು ಶಿವಮೊಗ್ಗಕ್ಕೆ ಕರೆಯಿಸಿಕೊಂಡು ರೂಂ ಒಂದರಲ್ಲಿ ಕೂಡಿಹಾಕಿ ಆತನನ್ನು ವಿವಸ್ತ್ರಗೊಳಿಸಿ ಬೇರೊಂದು ಯುವತಿಯೊಂದಿಗೆ ನಗ್ನವಾದ ಫೋಟೋ ಹಾಗೂ ವಿಡಿಯೋಗಳನ್ನು ದಾಖಲಿಸಿ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿದ್ದಾರೆ. ಹಾಗೂ ಸಂತ್ರಸ್ತ ಯುವಕನ ತಂದೆಯ ಬಳಿತೆರಳಿ ನಿಮ್ಮ ಮಗ ಹಾಗೂ ಯುವತಿಯಿರುವ ವಿಡಿಯೋಗಳಿದೆ ಹದಿನೈದು ಲಕ್ಷ ಹಣ ನೀಡದೇ ಹೋದಲ್ಲಿ ಆತನು ಜೀವಂತವಾಗಿ ನಿಮ್ಮ ಮನೆ ಸೇರುವುದಿಲ್ಲ ವಿಡಿಯೋ ಡಿಲೀಟ್ ಮಾಡಲು ಹದಿನೈದು ಲಕ್ಷ ಹಣ ನೀಡಲೇಬೇಕು ಎಂಬ ಬೇಡಿಕೆಯಿಟ್ಟು ನಕಲಿ ಖಾತೆಯನ್ನು ಸೃಷ್ಟಿಸಿ, ಖಾಲಿ ಚೆಕ್ ಒಂದನ್ನು ಅವರಿಂದ ಪಡೆದು ಹಣ ನೀಡದೆ ಹೋದರೆ ಬಲಾತ್ಕಾರದ ದೂರು ದಾಖಲಿಸುವುದಾಗಿ ಬೆದರಿಸುತ್ತಾರೆ.
ನಂತರ ನೀಡಿದ ದೂರಿನ ಮೇರೆಗೆ ಅತ್ಯಂತ ಚುರುಕಾಗಿ ಡಾ. ಸುಮನ್ ಡಿ ಪೆನ್ನೇಕರ್ ಐಪಿಎಸ್ ರವರು ರಚಿಸಿದ ಪೊಲೀಸ್ ತಂಡವು ಕೇವಲ 24 ಗಂಟೆಗಳಲ್ಲಿ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ವೇಗವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅಜೀತ ಶ್ರೀಕಾಂತ್ ನಾಡಿಗ, ಧನುಶ್ಯ ಕುಮಾರ್ ದಿಲೀಪ್ ಕುಮಾರ್ ಶೆಟ್ಟಿ, ಹಾಗೂ ಶಿವಮೊಗ್ಗದ ಪದ್ಮಜಾ ಡಿ.ಎನ್ ಎಂಬ ಮೂವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಶೃಂಗೇರಿ: ಬೋಗಸ್ ಹಕ್ಕುಪತ್ರದ ಆಧಾರದ ಮೇಲೆ ಇ ಸ್ವತ್ತು ದಾಖಲಿಸಿ ನಂತರ ರದ್ದು : ತನಿಖೆ ನಡೆಸಿ ಕ್ರಮಕ್ಕೆ ಒತ್ತಾಯಿಸಿ ದೂರು.
ಈ ಕಾರ್ಯಾಚರಣೆಯಲ್ಲಿ ಎಸ್. ಭದ್ರಿನಾತ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ರವಿ ಡಿ ನಾಯ್ಕ ಡಿ.ಎಸ್.ಪಿ ತನಿಖಾಧಿಕಾರಿ ರಾಮಚಂದ್ರ ನಾಯ್ಕ ಸಿಪಿಐ, ಸಿಬ್ಬಂದಿಗಳಾದ ಮಹಾಂತೇಶ, ಅಶೋಕ ನಾಯ್ಕ, ರಾಮಯ್ಯ ಪೂಜಾರಿ, ಶ್ರೀಮತಿ ವಿದ್ಯಾ, ಯಶೋಧಾ ನಾಯ್ಕ, ಭಾಗವಹಿಸಿ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ತನಿಖೆ ಮುಂದುವರೆದಿದ್ದು ಈ ಪೊಲೀಸ್ ತಂಡವನ್ನು ಹಾಗೂ ಪೊಲೀಸರನ್ನು ಇಲಾಖೆಯ ಅಧಿಕಾರಿಗಳು ಪ್ರಶಾಸಿಸಿದ್ದಾರೆ.

0 Comments