ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಕೊಪ್ಪದ ಗೌರಿಗದ್ದೆ ಅವಧೂತ ವಿನಯ್ ಗುರೂಜಿ ಆಶ್ರಮಕ್ಕೆ ಸಚಿವ ಈಶ್ವರಪ್ಪ ಇಂದು ಆಗಮಿಸಿ ಹೋಮದಲ್ಲಿ ಭಾಗವಹಿಸಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅವಧೂತ ವಿನಯ್ ಗುರೂಜಿ ಅವರ ಆಶ್ರಮಕ್ಕೆ ಇಂದು ಗ್ರಾಮೀಣಾಭಿವೃದ್ದಿ ಸಚಿವ ಕೆಎಸ್ ಈಶ್ವರಪ್ಪ ಕುಟುಂಬ ಸಮೇತರಾಗಿ ಇಂದು ಹೋಮದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ : ಮರದ ಕೊಂಬೆ ಬಿದ್ದು ಮೃತಪಟ್ಟ ಯುವಕ ; ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ
ಅನೇಕ ಗಣ್ಯರು ರಾಜಕೀಯ ವ್ಯಕ್ತಿಗಳು ಮುಂತಾದವರು ಹೆಚ್ಚಿನದಾಗಿ ಅವಧೂತ ವಿನಯ್ ಗುರೂಜಿ ಅವರ ಆಶ್ರಮಕ್ಕೆ ಭೇಟಿ ನೀಡಿ ಅವರ ಆಶೀರ್ವಾದವನ್ನು ಪಡೆಯುತ್ತಾರೆ ಅಂತೆಯೇ ಇಂದು ಸಚಿವ ಕೆ.ಎಸ್ ಈಶ್ವರಪ್ಪ ಅವರು ಕುಟುಂಬ ಸಮೇತ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡು ಗುರೂಜಿ ಅವರ ಆಶೀರ್ವಾದ ಪಡೆದರು ಹಾಗೂ ಆಶ್ರಮದ ವೀಕ್ಷಣೆ ಮಾಡಿದರು ಈ ಸಂದರ್ಭದಲ್ಲಿ ಅವರೊಂದಿಗೆ ಕೆ.ಎನ್ ಶೃಂಗೇಶ್ವರ, ಚಂದ್ರಣ್ಣ ಜಯಪುರ ಹಾಗೂ ಗುರುಗಳ ಆಪ್ತ ಕಾರ್ಯದರ್ಶಿ ಮಿಥುನ್ ಇದ್ದರು.

0 Comments