ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗದಲ್ಲಿ ಕೈ ಮೀರಿದ ಪರಿಸ್ಥಿತಿ, ಬಜರಂಗದಳದ ಹರ್ಷ ಎಂಬ ಕಾರ್ಯಕರ್ತನ ಸಾವಿನ ನಂತರ ಕ್ಷಣ ಕ್ಷಣಕ್ಕೂ ವಾತವರಣ ಬಿಗಡಾಯಿಸಿದ್ದು ಪರಿಸ್ಥಿತಿ ನಿಯಂತ್ರಣ ಮಾಡಲು ಪೊಲೀಸರು ಹೈರಾಣಾಗಿದ್ದಾರೆ.
ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ನಡೆದ ಹರ್ಷ ಎಂಬ ಬಜರಂಗದಳದ ಕಾರ್ಯಕರ್ತನ ಸಾವಿನ ನಂತರ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದರು, ಆ ನಂತರದಲ್ಲಿ ಪೊಲೀಸರು ವಾತಾವರಣವನ್ನು ತಿಳಿಗೊಳಿಸಿದ್ದರು. ಆದರೂ ಬೂದಿ ಮುಚ್ಚಿದ ಕೆಂಡದಂತೆ ಪರಿಸ್ಥಿತಿ ಬಿಗಡಾಯಿಸಿತ್ತು.
ಇದನ್ನೂ ಓದಿ : ಚಿಕ್ಕಮಗಳೂರಿನಲ್ಲಿ ಅಕ್ರಮ ಗೋಮಾಂಸ ದಂಧೆ; ಅಸ್ಸಾಂ ಕಾರ್ಮಿಕನ ಬಂಧನ ಸುಮಾರು 40 ಕೆ.ಜಿ ಗೋಮಾಂಸ ವಶ
ಹರ್ಷನ ಮೃತ ದೇಹದ ಮರಣೋತ್ತರ ಪರೀಕ್ಷೆಯ ಬಳಿಕದಲ್ಲು ಕೂಡ ಕಲ್ಲು ತೂರಾಟ ನಡೆದಿತ್ತು, ಎಷ್ಟೇ ಸಂಖ್ಯೆಯಲ್ಲಿ ಪೊಲೀಸರು ಇದ್ದರೂ ಕೂಡ ನಿಯಂತ್ರಣಕ್ಕೆ ತರಲು ಅಷ್ಟರಮಟ್ಟಿಗೆ ಸಾಧ್ಯವಾಗಲಿಲ್ಲ. ನಂತರದಲ್ಲಿ ಆರಂಭವಾದ ಮೃತ ದೇಹದ ಮೆರವಣಿಗೆಯ ಸಂದರ್ಭದಲ್ಲಿ ಎರಡು ಕೋಮಿನ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ಆರಂಭವಾಗಿದೆ.
ಪೊಲೀಸರು ಮೊದಲಿಗೆ ಅಶ್ರುವಾಯು ಪ್ರಯೋಗ ನಡೆಸಿದ್ದರು ಬಳಿಕ ಲಾಠಿ ಚಾರ್ಜ್ ಮಾಡಿದರು ಆದರೂ ಪರಿಸ್ಥಿತಿ ನಿಯಂತ್ರಣಕ್ಕೇ ಬಾರದ ಹಿನ್ನೆಲೆ ಇದೀಗ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ, ಓರ್ವ ವ್ಯಕ್ತಿಯ ತೊಡೆಗೆ ಗುಂಡು ತಗುಲಿದೆ ಎಂದು ತಿಳಿದುಬಂದಿದೆ.
ಅನೇಕರು ಕಲ್ಲು ತೂರಾಟದಿಂದ ಗಾಯಕ್ಕೀಡಾಗಿದ್ದಾರೆ. ಹಣೆ, ತಲೆ ಮುಂತಾದ ಭಾಗಗಳಿಗೆ ಅನೇಕರು ಗಾಯಕ್ಕೀಡಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಇನ್ನೂ ಜನರು ಜಮಾವಣೆ ಆಗಿದ್ದು ಕ್ಷಣದಿಂದ ಕ್ಷಣಕ್ಕೆ ಪರಿಸ್ಥಿತಿ ಸಂಪೂರ್ಣ ಕೈತಪ್ಪಿದೆ.

0 Comments