ಹಾಸನ : (ನ್ಯೂಸ್ ಮಲ್ನಾಡ್ ವರದಿ) ವಾಹನಗಳನ್ನು ಅಡ್ಡಗಟ್ಟಿ ದರೋಡೆ ನಡೆಸಲು ಯತ್ನಿಸಿದ ಐವರನ್ನು ಕಾರ್ಯಾಚರಣೆಯ ಮೂಲಕ ಖಾಕಿ ಪಡೆ ಸೆರೆ ಹಿಡಿದಿದೆ.

ಕೃತ್ಯದ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಹಾಸನ ತಾಲೂಕಿನ ಶಾಂತಿಗ್ರಾಮ ಹೋಬಳಿ ಮೊಸಳೆತಿಮ್ಮನ ಹಳ್ಳಿಯ ಸಮೀಪದಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಯ ಬಳಿ ಅನುಮಾನಾಸ್ಪದವಾಗಿ ವ್ಯಕ್ತಿಗಳು ಕಂಡು ಬಂದಿರುವುದನ್ನು ಗಮನಿಸಿದ ಗೊರೂರು ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಅಜಯ್ ಕುಮಾರ್ ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಹೊಂದಿದ್ದ ಖಾರದ ಪುಡಿಪೊಟ್ಟಣಗಳು, ಚಾಕು, ರಾಡ್, ದೊಣ್ಣೆ ಹಾಗೂ ಬೈಕನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಹೇಮಂತ್ ಕುಮಾರ್ ಗೌರಿ ಕೊಪ್ಪಲು, ಭಾರ್ಗವ ಕೆ.ಆರ್ ಪುರಂ, ಧನಂಜಯ್ ದರ್ಶನ್ ಎಂದು ಗುರುತಿಸಲಾಗಿದೆ. ಈ ಕುರಿತು ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಆರೋಪಿಗಳನ್ನು ತನಿಖೆ ಮಾಡುತ್ತಿದ್ದಾರೆ. ಆರೋಪಿಗಳ ಕೃತ್ಯದ ಕುರಿತು ಪೊಲೀಸರ ತನಿಖೆಯಿಂದಶ್ಟೇ ಹೆಚ್ಚಿನ ಮಾಹಿತಿಗಳು ತಿಳಿಯಬೇಕಿದೆ. 

ಇದನ್ನೂ ಓದಿ :ಹಿಜಾಬ್ ವಿವಾದ : ಜಿಲ್ಲಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರಿಂದ ರೂಟ್ ಮಾರ್ಚ್

ವಾಹನಸಂಚಾರ ಮಾಡುವವರು ತಮ್ಮ ಪ್ರಯಾಣದ ಅವಧಿಯಲ್ಲಿ ಈ ರೀತಿಯ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಪೊಲೀಸರಿಗೆ ಮುಕ್ತವಾಗಿ ಮಾಹಿತಿ ನೀಡಿ ಎದುರಾಗಬಹುದಾದ ಅಪಾಯಗಳನ್ನು ನಿಯಂತ್ರಿಸುವಲ್ಲಿ ಸಹಕಾರ ನೀಡಬೇಕೆಂದು ಸಾರ್ವಜನಿಕರಿಗೆ ತಿಳಿಸಿದ್ದಾರೆ.