Fact Check: (News Malnad) ಕಳೆದೆರಡು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಹುಲಿ ಪ್ರತ್ಯಕ್ಷ ಎಂಬ ಊಹಾಪೂಹ ಕುರಿತಂತೆ ನ್ಯೂಸ್ ಮಲ್ನಾಡ್ ಫ್ಯಾಕ್ಟ್ ಚೆಕ್ ನಡೆಸಿದ್ದು, ಈ ವೀಡಿಯೋ ಇಲ್ಲಿಯದ್ದಲ್ಲ ಎಂಬ ಮಾಹಿತಿ ದೊರಕಿದೆ.

ಇದನ್ನೂ ಓದಿ : ಸಿಂಹಗಳ ನಡುವೆ ಕಾದಾಟ ; ಸಾವನ್ನಪ್ಪಿದ ಹೆಣ್ಣುಸಿಂಹ

ಕಳೆದೆರಡು ದಿನದಿಂದ ಹುಲಿಯೊಂದು ರಸ್ತೆ ದಾಟಿ ಅರಣ್ಯದ ಕಡೆಗೆ ಹೋಗುತ್ತಿರುವ ದೃಶ್ಯ ವೈರಲ್ ಆಗಿತ್ತು. ಘಾಟ್ ರಸ್ತೆಯಾಗಿದ್ದರಿಂದ ಕೆಲವರು ಇದನ್ನು ಎಸ್ ಕೆ ಬಾರ್ಡರ್, ಕುದುರೆಮುಖ ಎಂದಿದ್ದರೆ ಇನ್ನೂ ಕೆಲವರು ಚಾರ್ಮಾಡಿ ಘಾಟ್ ಎಂದು ವೀಡಿಯೋ ಹಂಚಿಕೊಂಡಿದ್ದರು. ಆದರೆ ಈ ವೀಡಿಯೋ ಅಸಲಿಗೆ ಕರ್ನಾಟಕ ರಾಜ್ಯದ್ದೇ ಅಲ್ಲ. ಬದಲಾಗಿ ತಮಿಳುನಾಡಿನದ್ದು ಎಂಬ ಮಾಹಿತಿಯನ್ನು ಅರಣ್ಯಾಧಿಕಾರಿಗಳು ನೀಡಿದ್ದಾರೆ.