ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದ ಎಸ್ ಡಿ ಪಿ ಐ ಷಡ್ಯಂತ್ರ ಆಗಿದ್ದು ಈ ಕುರಿತು ಸಂಪೂರ್ಣ ತನಿಖೆಯಾಗಬೇಕೆಂದು ಆಗ್ರಹಿಸಿ ವಿಶ್ವಹಿಂದೂ ಪರಿಷತ್ ಬಜರಂಗದಳ ಆಗ್ರಹಿಸಿದೆ.

ಇದನ್ನೂ ಓದಿ : ಮುಸ್ಲಿಂ ಹುಡುಗ ಶೃಂಗೇರಿ ಮೂಲದ ಹಿಂದೂ ಹುಡುಗಿಯ ಮಧ್ಯರಾತ್ರಿಯ ಪ್ರೇಮ್ ಕಹಾನಿಗೆ ಸ್ಥಳೀಯರ ಅಡ್ಡಿ ಕ್ಲಾಸ್ ತೆಗೆದುಕೊಂಡವರ ಮೇಲೆಯೇ ಕೇಸ್ ದಾಖಲು!

ರಾಜ್ಯದಲ್ಲಿ ಹಿಜಾಬ್ ಧರಿಸುವಿಕೆಯ ಕುರಿತಾಗಿ ಉಂಟಾಗಿರುವ ಗೊಂದಲ ಗಲಭೆಗಳು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ ಇದರ ಹಿಂದೆ ಬಹುದೊಡ್ಡ ಷಡ್ಯಂತ್ರ ನಿರ್ಮಾಣವಾಗಿದೆ ಈ ಬೆಳವಣಿಗೆಗಳ ಹಿಂದೆ ದೇಶದ್ರೋಹಿ ಸಂಘಟನೆಗಳಾದ ಪಿಎಫ್ಐ ಹಾಗೂ ಎಸ್.ಡಿ.ಪಿ.ಐ ಇದೆ ಎಂದು ಬಜರಂಗದಳ ಆರೋಪಿಸಿದೆ. CFI ಎಂಬ ಸಂಘಟನೆ ಕೂಡ ಈ ವಿವಾದದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಭಾರತದ ಪ್ರತಿಷ್ಠೆಯನ್ನು ಘನತೆಯನ್ನು ಬೇರೆ ದೇಶಗಳ ಮುಂದೆ ಕುಗ್ಗಿಸುವ ವ್ಯವಸ್ಥಿತ ಷಡ್ಯಂತ್ರ ರೂಪುಗೊಂಡಿದೆ ಈ ಕುರಿತು ರಾಷ್ಟ್ರೀಯ ತನಿಖಾ ದಳಕ್ಕೆ ದೂರು ಸಲ್ಲಿಸಿ ತನಿಖೆ ನಡೆಸಿ ಈ ಕೃತ್ಯದ ಹಿಂದಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿಗಳ ಮುಖಾಂತರವಾಗಿ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳನ್ನು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.

ಇದಲ್ಲದೆ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಪರಿಗಣಿಸದೆ ದಿನಬೆಳಗಾದರೆ ಅನೇಕ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜುಗಳಲ್ಲಿ ಕೂರುವ ನಿರ್ಧಾರ ಕೈಗೊಂಡು ಉಳಿದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ನೀಡುತ್ತಿದ್ದಾರೆ ಇದು ಸಮಂಜಸವಲ್ಲದ ಬೆಳವಣಿಗೆ ಹೈಕೋರ್ಟ್ ನ ನಿಯಮ ಉಲ್ಲಂಘನೆ ಮಾಡುತ್ತಿರುವುದು ಆತಂಕ ಉಂಟುಮಾಡುತ್ತಿರುವ ವಿಚಾರವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ದೇಶವಿಭಜನೆಯ ಹಾಗೂ ಕೋಮುಗಲಭೆ ಹುನ್ನಾರವನ್ನಿಟ್ಟುಕೊಂಡು ರಾಜ್ಯದ ಶಾಂತಿ ಕದಡಲು ಯತ್ನಿಸುತ್ತಿರುವ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಶ್ರೀಕಾಂತ ಪೈ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷರು, ರಂಗನಾಥ್ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ, ಗುರು ಬಜರಂಗದಳ ಜಿಲ್ಲಾ ವಿದ್ಯಾರ್ಥಿ ಪ್ರಮುಖ್, ಕೃಷ್ಣ ಟಿ ಗೌಡ ಬಜರಂಗದಳ ತಾಲೂಕು ಗೋರಕ್ಷಾ ಪ್ರಮುಖ್ ಚಿಕ್ಕಮಗಳೂರು, ಶ್ಯಾಮ್ ಗೌಡ ನಗರ ಸಂಯೋಜಕ ಬಜರಂಗದಳ ಚಿಕ್ಕಮಗಳೂರು, ಮಂಜು ಎಂ.ಜಿ ರೋಡ್, ಸುನಿಲ್ ಆಚಾರ್ ನಗರ ಸಹ ಸಂಯೋಜಕ ಬಜರಂಗದಳ ಚಿಕ್ಕಮಗಳೂರು, ಪ್ರಸಾದ್ ಕೋಟೆ ನಗರ ಸಂಪರ್ಕ ಪ್ರಮುಖ್ ಬಜರಂಗದಳ ಚಿಕ್ಕಮಗಳೂರು, ವಿಕ್ಕಿ ಹಾಗೂ ಬಜರಂಗದಳದ ಕಾರ್ಯಕರ್ತರು ಇದ್ದರು.