ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗದಲ್ಲಿ ನಡೆದ ಕೋಮುಗಲಭೆಗೆ ಹಾಗೂ ಶವಯಾತ್ರೆಯ ಸಂದರ್ಭದಲ್ಲಿ ನಡೆದ ಗಲಭೆಗೆ ನೇರ ಕಾರಣ ಸಂಘಪರಿವಾರ ಎಂದು ಅಬ್ದುಲ್ ಮಜೀದ್ ಆರೋಪಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿದ ಎಸ್ಡಿಪಿಐ ಮುಖಂಡರು ರಾಜ್ಯದಲ್ಲಿ ಯಾವುದೇ ಘಟನೆಗಳು ನಡೆದರೂ ಕೂಡ ಬಿಜೆಪಿಯ ಕೆಲ ಮಂತ್ರಿಗಳು ನೇರವಾಗಿ ಆರೋಪ ಮಾಡುವುದು ಎಸ್ಡಿಪಿಐ, ಸಿಎಫ್ಐ, ಪಿಎಫ್ಐ ಕೈವಾಡ ಈ ಕೃತ್ಯಗಳ ಹಿಂದಿದೆ ಎಂದು. ಸಚಿವ ಈಶ್ವರಪ್ಪ ಘಟನೆಯು ನಡೆದ ತಕ್ಷಣ ಮುಸ್ಲಿಂ ಗೂಂಡಾಗಳು ಈ ಕೃತ್ಯವನ್ನು ಎಸಗಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ, ಘಟನೆ ನಡೆದು ತನಿಖೆ ನಡೆಯದಿರುವ ಸಂದರ್ಭದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿಯ ಹೇಳಿಕೆ ನೀಡಿದರೆ ಜನರು ಪ್ರಚೋದನೆಗೊಳಗಾಗುತ್ತಾರೆ. ಇದನ್ನೆಲ್ಲಾ ಮೊದಲೇ ಯೋಚಿಸಿ ನಂತರದಲ್ಲಿ ರಾಜ್ಯದ ಮಂತ್ರಿ ವರ್ಗ ಅಥವಾ ಜನಪ್ರತಿನಿಧಿಗಳು ಹೇಳಿಕೆ ನೀಡಬೇಕಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ವಿಚಾರ ತಿಳಿದು ಆತ್ಮಹತ್ಯೆಗೆ ಶರಣಾದ ಪತಿ
ಮುಸಲ್ಮಾನರೇ ಟಾರ್ಗೆಟ್ :
ಶಿವಮೊಗ್ಗದಲ್ಲಿ ಸೆಕ್ಷನ್ 144 ವಿಧಿಸಲಾಗಿದ್ದರೂ ಕೂಡ ಅತಿ ದೊಡ್ಡ ಮಟ್ಟದ ಕೋಮುಗಲಭೆ ನಡೆಯಲು ಸರ್ಕಾರದ ವೈಫಲ್ಯವೇ ಕಾರಣ. ಶವ ಯಾತ್ರೆಯ ವೇಳೆ ಬಹುತೇಕ ಮುಸಲ್ಮಾನರ ಮನೆಗಳ ಮೇಲೆ, ಅವರ ವಸ್ತುಗಳ ಮೇಲೆ ಬೆಂಕಿ ಹಾಕಲಾಗಿದೆ, ವಾಹನಗಳನ್ನು ಜಖಂ ಮಾಡಲಾಗಿದೆ ಈ ಕೃತ್ಯವನ್ನು ಸಚಿವ ಈಶ್ವರಪ್ಪ ಸಂಸದ ರಾಘವೇಂದ್ರ ಅವರ ಎದುರೇ ನಡೆಸಲಾಗಿದೆ. ಅದಲ್ಲದೆ ಈ ಸಂದರ್ಭದಲ್ಲಿ ಪೊಲೀಸರು ಇದ್ದರೂ ಕೂಡ ನಿಯಂತ್ರಿಸಲು ಸಾಧ್ಯವಾಗಿಲ್ಲ. ಸಂಪೂರ್ಣವಾಗಿ ಭಯದ ವಾತಾವರಣ ನಿನ್ನೆ ಶಿವಮೊಗ್ಗದಲ್ಲಿ ಸೃಷ್ಟಿಯಾಗಿತ್ತು. ಕರ್ಫ್ಯೂ ಹಾಗೂ ಸೆಕ್ಷನ್ ಉಲ್ಲಂಘನೆ ಮಾಡಲು ಇಲ್ಲಿ ನೇರ ಕಾರಣ ಮಂತ್ರಿ ಈಶ್ವರಪ್ಪ ಹಾಗೂ ಸಂಸದ ರಾಘವೇಂದ್ರ ಎಂದು ಆರೋಪ ಮಾಡಿದ್ದಾರೆ.
ಗೃಹಸಚಿವ ಆರಗ ಜ್ಞಾನೇಂದ್ರ ಅವರ ಕುಮ್ಮಕ್ಕಿನಿಂದ ಈ ಘಟನೆ ನಡೆದಿದೆ, ಅವರೇ ಈ ಗಲಭೆಯ ಹೊರಬೇಕು ಎಂದು ಆರೋಪಿಸಿದ್ದಾರೆ. ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡದ ನೀವು ಕರ್ನಾಟಕದಲ್ಲಿ ಪೊಲೀಸ್ ಇಲಾಖೆಯನ್ನು ವಿಸರ್ಜಿಸಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಕೆಲ ಸಮಯದ ಹಿಂದೆ ಗದಗದ ನರಗುಂದದಲ್ಲಿ ಮುಸ್ಲಿಂ ಮುಖಂಡನನ್ನು ಕೊಲೆ ಮಾಡಿ ನಾಲ್ವರು ಸಂಘ ಪರಿವಾರದ ಪ್ರಮುಖರು ಜೈಲಿನಲ್ಲಿದ್ದಾರೆ. ಆದರೆ ಯಾವುದೇ ಮುಸ್ಲಿಮರು ಈ ರೀತಿಯ ಪ್ರಚೋದನೆಗೆ ಒಳಗಾಗಲಿಲ್ಲ ಯಾರೂ ಪ್ರತಿಕ್ರಿಯೆಗೆ ಮುಂದಾಗಲಿಲ್ಲ. ಆ ಸಮಯದಲ್ಲಿ ಯಾವುದೇ ಸಂಸದ, ಸಚಿವ, ಶಾಸಕರಾಗಿ ಸಂತಾಪ ವ್ಯಕ್ತಪಡಿಸಲಿಲ್ಲ. ಕಾಂಗ್ರೆಸ್ಸಿಗರು ಸಂತಾಪ ಸೂಚಿಸಿರಲಿಲ್ಲ ಇದೀಗ ಟ್ವೀಟ್ ಗಳ ಮೇಲೆ ಟ್ವೀಟ್ ಮಾಡುವುದರ ಮೂಲಕ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದರು.
ಸಂಸದ ಪ್ರತಾಪಸಿಂಹ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು, ಎಲ್ಲದಕ್ಕೂ ಎಸ್.ಡಿ.ಪಿ.ಐ, ಪಿ.ಎಫ್.ಐ ಹೆಸರು ಹೇಳುವುದು ಸರಿಯಲ್ಲ ಎಂದು ಎಚ್ಚರಿಸಿದ್ದಾರೆ.
ಸಂಘಪರಿವಾರದವರು ನಾವೆಲ್ಲ ಹಿಂದು ನಾವೆಲ್ಲ ಒಂದು ಎಂಬ ಘೋಷಣೆಯನ್ನು ಮಾತ್ರ ಹೇಳುತ್ತಾರೆ ಆದರೆ ಹಿಂದೂಗಳ ಕೊಲೆಯನ್ನು ಸಂಘಪರಿವಾರದವರೇ ನಡೆಸಿದ್ದಾರೆ ಹಿಂದೂ ಸಂಘಟನೆಯ ಕಾರ್ಯಕರ್ತ ಪ್ರತಾಪ್ ಮುರೊಳ್ಳಿ ಆತನ ಕೊಲೆಯ ಹಿಂದೆ ಸಂಘ ಪರಿವಾರವಿದೆ, ಶ್ರೀನಿವಾಸ್, ಮಣಿಕಂಠ ಸುರತ್ಕಲ್, ಕೇಶವ ಪೂಜಾರಿ ಸೂರಿಂಜೆ ಮುಂತಾದ ಹದಿಮೂರು ಜನ ಹಿಂದೂ ಕಾರ್ಯಕರ್ತರ ಕೊಲೆಯ ಹಿಂದೆ ಸಂಘ ಪರಿವಾರದವರೇ ಇದ್ದಾರೆ ಈ ಕುರಿತು ಯಾರು ಧ್ವನಿ ಎತ್ತುವವರು ಎಂದಿದ್ದಾರೆ.
ಕಾಂಗ್ರೆಸ್ ಜೆಡಿಎಸ್ ಪಕ್ಷಕ್ಕೆ ನೀವು ಹೆದರಿಸಿ ಬೆದರಿಸುವ ಮೂಲಕ ರಾಜಕೀಯ ಮಾಡಲು ಬಿಡದೆ ಇರಬಹುದು ಆದರೆ ನಿಮ್ಮ ಇಂತಹ ಪೊಳ್ಳು ಬೆದರಿಕೆಗಳಿಗೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಎಂದಿಗೂ ಬಗ್ಗುವುದಿಲ್ಲ ಎಂಬ ವಾಗ್ದಾಳಿಯನ್ನು ನಡೆಸಿದ್ದಾರೆ. ಅಡಗಿ ಕುಳಿತು ರಾಜಕೀಯ ನಡೆಸುವವರು ನಾವಲ್ಲ ನೇರವಾಗಿ ರಾಜಕಾರಣ ಮಾಡುವವರು ನಾವು ಎಂದಿದ್ದಾರೆ.
ಈಶ್ವರಪ್ಪ ಎಂಬ ವ್ಯಕ್ತಿಗೆ ನಾಚಿಕೆ ಮಾನ ಮರ್ಯಾದೆಯನ್ನು ಬಿಟ್ಟ ಗೂಂಡಾ ಆತನಿಂದ ಜನ ಏನನ್ನು ಬಯಸಲು ಸಾಧ್ಯ, ತಮ್ಮ ಸರ್ಕಾರವೇ ಇರುವಾಗ ಈ ರೀತಿಯ ಕೃತ್ಯ ಎಸಗಿ ಇವರದೇ ಸರ್ಕಾರ ಈ ಕೊಲೆಯನ್ನು ನಡೆಸಿರಬಹುದು ಎಂದು ಆರೋಪಿಸಿದ್ದಾರೆ. ಇದು ಕೊಲೆಗಡುಕ ಸರ್ಕಾರ, ಗೂಂಡಾ ಸರ್ಕಾರ ಎಂಬುದಾಗಿ ಹೇಳಿಕೆ ನೀಡಿದ್ದಾರೆ.

0 Comments