ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯ ಶಾರದಾ ಮಠದ ಆವರಣದಲ್ಲಿ ಈ ಬಾರಿ ಪ್ರಥಮ ವರ್ಷದ ಶೃಂಗೇರಿ ಉತ್ಸವ ಕಾರ್ಯಕ್ರಮವು ಆಯೋಜನೆಗೊಂಡಿದೆ.
ಇದನ್ನೂ ಓದಿ : ವೈ.ಜಿ ಸುರೇಶ್ ಮೇಲೆ ಪೊಲೀಸ್ ಅಧಿಕಾರಿಯಿಂದ ಹಲ್ಲೆ ಆರೋಪ ; ಅಧಿಕಾರಿ ಮೇಲೆ ಕ್ರಮ ಕೈಗೊಳ್ಳುವಂತೆ ಬಬ್ಬುಸ್ವಾಮಿ ಮುಂಡಾಲ ಸಮಾಜದಿಂದ ಮನವಿ
ಅತ್ಯಂತ ಪ್ರಸಿದ್ಧಿ ಪಡೆದಿರುವ ಧಾರ್ಮಿಕ ಕ್ಷೇತ್ರ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಪೀಠದ ಆವರಣದಲ್ಲಿ ಇದೇ ಮಾರ್ಚ್ 13 ನೆಯ ತಾರೀಖಿನಿಂದ 19 ರ ವರೆಗಿನ ಒಂದು ವಾರ ಅತ್ಯಂತ ವಿಜೃಂಭಣೆ ಹಾಗೂ ವೈಭವದಿಂದ ಶೃಂಗೇರಿ ಉತ್ಸವ ಕಾರ್ಯಕ್ರಮ ನಡೆಯುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಶ್ರೀ ಮಠವು ಧರ್ಮ ಪ್ರಸಾರ ಹಾಗೂ ರಕ್ಷಣೆಯ ಜೊತೆಗೆ ಭಾರತೀಯ ಕಲೆ ಮತ್ತು ಸಂಸ್ಕೃತಿಗೆ ಅದರ ಉಳಿವಿಗೆ ಸದಾಕಾಲ ಶ್ರಮಿಸುತ್ತದೆ. ಅಂತೆಯೇ ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಲಾವಿದರನ್ನು ಗುರುತಿಸುವ ಸಲುವಾಗಿ ಅವರ ಕಲೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಮತ್ತು ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯ ಉಳಿವಿಗಾಗಿ ಈ ಕಾರ್ಯಕ್ರಮದ ಆಯೋಜನೆಯನ್ನು ಉಭಯ ಜಗದ್ಗುರುಗಳ ಅನುಗ್ರಹದೊಂದಿಗೆ ಹಾಗೂ ಕರ್ನಾಟಕ ಸರ್ಕಾರದ ಬೆಂಬಲದೊಂದಿಗೆ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮವು ಭವ್ಯವಾದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಉತ್ಸವವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
50 ಲಕ್ಷ ಅನುದಾನ : ಶೃಂಗೇರಿ ಉತ್ಸವಕ್ಕೆ ಸರ್ಕಾರದಿಂದ 50 ಲಕ್ಷಗಳ ಅನುದಾನ ನೀಡಲಾಗುತ್ತಿದ್ದು, ಕಾರ್ಯಕ್ರಮವು ಶೃಂಗೇರಿ ಶ್ರೀಮಠದ ಆವರಣದಲ್ಲಿ ನಡೆಯಲಿದ್ದು, ಶೃಂಗೇರಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಬಹುದು ಎಂದು ಜನರು ಕುತೂಹಲದಿಂದ ಕಾರ್ಯಕ್ರಮಕ್ಕೆ ಕಾಯುತ್ತಿದ್ದಾರೆ.
ಮಾರ್ಚ್ 13 ರಿಂದ 19 ರ ವರೆಗೆ ಆಯೋಜನೆಗೊಂಡಿರುವ ಈ ಕಾರ್ಯಕ್ರಮದಲ್ಲಿ ಮೊದಲ ದಿನವಾದ ಮಾರ್ಚ್ 13 ರಂದು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡುಗಾರಿಕೆ ನಡೆಸಲಿದ್ದಾರೆ. ಮಾರ್ಚ್ 14 ರಂದು ಅಸ್ತಿತ್ವಂ ಥಿಯೇಟರ್ ಫೌಂಡೇಶನ್ ಕಲಾವಿದರು ಶಂಕರಾಚಾರ್ಯರ ಕುರಿತಾದ ರೂಪಕವನ್ನು ನಡೆಸಲಿದ್ದಾರೆ. ಮಾರ್ಚ್ 15 ರಂದು ಸುಪ್ರಸಿದ್ದ ಗಾಯಕಿ ವಿದುಷಿ ಅನುರಾಧ ಭಟ್ ಹಾಡುಕರಿಗೆ ನಡೆಸಲಿದ್ದಾರೆ. ಮಾರ್ಚ್ 16 ರಂದು ವಿದುಷಿ ಶ್ರೀಮತಿ ಅನುರಾಧ ಪೌಡ್ವಾಲ್ ಹಾಡುಗಾರಿಕೆ ನಡೆಸಲಿದ್ದಾರೆ. ಮಾರ್ಚ್ 17 ರಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಶ್ರೀ ಬಾಪು ಪದ್ಮನಾಭ ಅವರು ಕೊಳಲು ವಾದನ ಮಾಡಲಿದ್ದಾರೆ. ಮಾರ್ಚ್ 18 ರಂದು ಅಂತಾರಾಷ್ಟ್ರೀಯ ವಯೋಲಿನ್ ವಾದಕ ಪದ್ಮಭೂಷಣ ಡಾ. ಎಲ್ ಸುಬ್ರಮಣ್ಯಂ ವಯೋಲಿನ್ ವಾದನ ಮಾಡಲಿದ್ದಾರೆ. ಮಾರ್ಚ್ 19 ರ ಕೊನೆಯ ದಿನ ಶ್ರೀ ರಾಮ ಪ್ರತೀಕ್ಷಾ ನೃತ್ಯ ರೂಪಕ ನಡೆಯಲಿದೆ.
ಈ ಕಾರ್ಯಕ್ರಮಗಳು ನಡೆಯುವ ಎಲ್ಲಾ ದಿನಗಳಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಸವಿಯಬೇಕೆಂದು ಸಾರ್ವಜನಿಕರನ್ನು ಆಯೋಜಕರು ಕೋರಿದ್ದಾರೆ.

0 Comments