ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ ತಿಂಗಳಿನಲ್ಲಿ ಮಲೆನಾಡಿಗೆ ಆಗಮಿಸಲಿದ್ದಾರೆ ಈ ಹಿನ್ನೆಲೆ ದೇಶದ ಪ್ರಧಾನ ಮಂತ್ರಿಯವರನ್ನು ಸ್ವಾಗತಿಸುವ ಸಲುವಾಗಿ ಮತ್ತು ಅವರ ಭದ್ರತೆಯ ದೃಷ್ಟಿಯಿಂದ ಈಗಾಗಲೇ ಭರದ ಸಿದ್ಧತೆಗಳು ಆರಂಭಗೊಂಡಿವೆ.

ಇದನ್ನೂ ಓದಿ : ಶಿವಮೊಗ್ಗ : ಪ್ರೀತಿಸಿ ಮದುವೆಯಾಗಿದ್ದ ಹಿಂದೂ ಮುಸ್ಲಿಂ ಜೋಡಿ, ಹೇರಿಗೆಯಾದ ಐದೇ ದಿನಕ್ಕೆ ಯುವತಿ ಸಾವು ಯುವತಿ ಕುಟುಂಬಸ್ಥರಿಂದ ಲವ್ ಜಿಹಾದ್ ಆರೋಪ


ಶಿವಮೊಗ್ಗ ಜಿಲ್ಲೆಯ ಹೊಳಲೂರು ಗ್ರಾಮ ಪಂಚಾಯತ್ ಗೆ ಭಾರತದ ಪ್ರಧಾನಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 24 ರಂದು ಆಗಮಿಸಲಿದ್ದಾರೆ ಈ ನಿಟ್ಟಿನಲ್ಲಿ ಆಗಬೇಕಾದ ಎಲ್ಲಾ ಸಿದ್ಧತೆಗಳು ಈಗಿನಿಂದಲೇ ಆರಂಭಗೊಂಡಿದೆ. 

ಈ ಕುರಿತು ಪರಿಶೀಲನೆ ನಡೆಸಲು ಸ್ಥಳಕ್ಕೆ ಸಚಿವರಾದ ಕೆ.ಎಸ್ ಈಶ್ವರಪ್ಪ ಅವರೇ ಆಗಮಿಸಿದ್ದು ಈ ಕುರಿತು ಮಾಹಿತಿ ನೀಡಿದ್ದಾರೆ. ಒಟ್ಟು ಹದಿನೈದು ಎಕರೆ ಜಾಗದಲ್ಲಿ ಹತ್ತು ಎಕರೆ ಜಾಗ ಕಾರ್ಯಕ್ರಮಕ್ಕೆ ಬಳಕೆಯಾಗಲಿದೆ ಇನ್ನುಳಿದ ಐದು ಎಕರೆ ಜಾಗದಲ್ಲಿ ಹೆಲಿಪ್ಯಾಡ್ ನಿರ್ಮಾಣವಾಗಲಿದೆ ಎಂದರು. ಏಪ್ರಿಲ್ 24 ರಂದು ಮಧ್ಯಾಹ್ನ ಹನ್ನೆರಡು ಗಂಟೆಗೆ ಸರಿಯಾಗಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಇಲಾಖೆಗಳ ಕುರಿತು ಮಾಹಿತಿ ಪಡೆದು ಕೆಲ ಸಮಯ ಗ್ರಾಮಸ್ಥರೊಂದಿಗೆ ಸಂವಾದ ನಡೆಸಲಿದ್ದಾರೆ ನಂತರದಲ್ಲಿ ಜನರನ್ನುದೇಶಿಸಿ ಮಾತನಾಡಲಿದ್ದಾರೆ ಎಂದರು. ಪ್ರಸ್ತುತ ವಿಧಾನಸಭೆ ಅಧಿವೇಶನಯಿದ್ದು ಅಧಿವೇಶನ ಮುಗಿದ ನಂತರ ಈ ಕುರಿತು ಸಭೆಗಳನ್ನು ನಡೆಸಿ ಅಗತ್ಯವಾದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದರು. 

ಕೆ.ಎಸ್ ಈಶ್ವರಪ್ಪ ಅವರೊಂದಿಗೆ ಸಂಸದರಾದ ಬಿ.ವೈ ರಾಘವೇಂದ್ರ, ಎಸ್‌ ದತ್ತಾತ್ರಿ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್‌.ಕೆ ಅತೀಕ್‌, ಆರ್‌ಡಿಪಿಆರ್‌ ಆಯುಕ್ತೆ ಶಿಲ್ಪಾನಾಗ್‌, ಕೆಆರ್‌ಐಡಿಎಲ್‌ ವ್ಯವಸ್ಥಾಪಕ ನಿರ್ದೇಶಕ ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ ಡಾ ಆರ್‌ ಸೆಲ್ವಮಣಿ, ಜಿಲ್ಲಾ ಪೊಲೀಸ್‌ ಅಧೀಕ್ಷಕ ಬಿ.ಎಂ ಲಕ್ಷ್ಮೀಪ್ರಸಾದ್‌, ಜಿಪಂ ಸಿಇಒ ಎಂ.ಎಲ್‌ ವೈಶಾಲಿ, ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದು ಕೂಲಂಕುಷವಾಗಿ ಸ್ಥಳ ಪರಿಶೀಲನೆ ನಡೆಸಿದರು ಹಾಗೂ ಅಗತ್ಯವಾಗಿ ಕಲ್ಪಿಸಬೇಕಾದ ವ್ಯವಸ್ಥೆಗಳ ಕುರಿತು ಚರ್ಚಿಸಿದರು.