ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಬಜರಂಗದಳದ ಕಾರ್ಯಕರ್ತ ಹರ್ಷನನ್ನು ಫೆಬ್ರವರಿ 20 ರ ಭಾನುವಾರದಂದು ನಡುರಸ್ತೆಯಲ್ಲಿ ಬರ್ಬರವಾಗಿ ಕೆಲ ಕಿಡಿಗೇಡಿಗಳು ಹತ್ಯೆ ಮಾಡಿದ್ದರು. ಆತನ ಸಾವಿಗೆ ಇಡೀ ಕರುನಾಡು ಬೇಸರ ಹಾಗೂ ಆಕ್ರೋಶವನ್ನು ವ್ಯಕ್ತಪಡಿಸಿತ್ತು ಹಾಗೂ ಕುಟುಂಬಕ್ಕೆ ನೆರವಾಗುವ ಸಲುವಾಗಿ ಅನೇಕರು ಮುಂದೆ ಬಂದಿದ್ದರು ಪ್ರಸ್ತುತ ಸರ್ಕಾರ ಹರ್ಷನ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದೆ.
ಇದನ್ನೂ ಓದಿ : ಧರ್ಮಸ್ಥಳ ಪಾದಯಾತ್ರೆ ವೇಳೆ ಬಿಸಾಡಿದ್ದ ತ್ಯಾಜ್ಯ ತಿಂದು 09ಕ್ಕೂ ಹೆಚ್ಚು ಜಾನುವಾರುಗಳ ಸಾವು
ಮುಸ್ಲಿಮರಿಂದ ಕೊಲೆಯಾದ ಶಿವಮೊಗ್ಗದ ಸೀಗೆಹಟ್ಟಿ ಹರ್ಷನ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂಪಾಯಿ ಹಣವನ್ನು ಘೋಷಣೆ ಮಾಡಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಹಾಗೂ ಶಿವಮೊಗ್ಗದ ಶಾಸಕರಾದ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು ರಾಜ್ಯ ಸರ್ಕಾರ 25 ಲಕ್ಷ ಪರಿಹಾರವನ್ನು ಹತ್ಯೆಗೀಡಾದ ಹರ್ಷನ ಕುಟುಂಬಕ್ಕೆ ಘೋಷಣೆ ಮಾಡಿದೆ. ಇದೇ ಮಾರ್ಚ್ ಆರನೇ ತಾರೀಕಿನಂದು ಕರ್ನಾಟಕದ ಹಿರಿಯ ಬಿಜೆಪಿ ನಾಯಕರಾದ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ ಈಶ್ವರಪ್ಪ ಅವರೂ ತೆರಳಿ ಕುಟುಂಬಕ್ಕೆ ಪರಿಹಾರವನ್ನು ನೀಡುವುದಾಗಿ ತಿಳಿಸಿದರು.
ಹರ್ಷನ ಹತ್ಯೆಯ ಬಳಿಕ ಇಡೀ ಶಿವಮೊಗ್ಗದಲ್ಲಿ ಅತ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ಆತನ ಶವಯಾತ್ರೆಯ ವೇಳೆ ಕಲ್ಲು ತೂರಾಟ,ಗಲಾಟೆ, ನಡೆದಿದ್ದು ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಕೆಲ ದಿನಗಳ ಕಾಲ 144 ಸೆಕ್ಷನ್ ವಿಧಿಸಿದ್ದರು ಶಾಲಾ ಕಾಲೇಜುಗಳಿಗೆ ಕೂಡ ರಜೆ ಘೋಷಣೆ ಮಾಡಲಾಗಿತ್ತು, ಪ್ರಸ್ತುತ ಪರಿಸ್ಥಿತಿಯು ಹತೋಟಿಗೆ ಬಂದಿದ್ದು ಶಾಲಾ ಕಾಲೇಜುಗಳು ಎಂದಿನಂತೆ ಆರಂಭವಾಗಿದೆ.
ಘಟನೆ ನಡೆದ 24 ಘಂಟೆಗಳೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು ಈ ಸಂಬಂಧ ಆರೋಪಿಗಳ ಕಠಿಣ ಶಿಕ್ಷೆಗೆ ಆಗ್ರಹಿಸಿ ರಾಜ್ಯ ಹೊರರಾಜ್ಯದ ಅನೇಕ ಕಡೆಗಳಲ್ಲಿ ತೀವ್ರವಾದ ಪ್ರತಿಭಟನೆ ನಡೆದಿತ್ತು ಪ್ರಸ್ತುತ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.

0 Comments