ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಬಜರಂಗದಳದ ಸಕ್ರಿಯ ಕಾರ್ಯಕರ್ತ ಹರ್ಷ ಮನೆಗೆ ಇಂದು ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕರಾದ ಬಿ.ಎಸ್ ಯಡಿಯೂರಪ್ಪ ಹಾಗೂ ಶಿವಮೊಗ್ಗದ ಶಾಸಕ ಕೆ ಎಸ್ ಈಶ್ವರಪ್ಪ ಭೇಟಿ ನೀಡಿ ಸರ್ಕಾರದ ವತಿಯಿಂದ ಕುಟುಂಬಕ್ಕೆ ನೀಡುವ ಪರಿಹಾರವನ್ನು ಕೈ ಸೇರಿಸಿದರು.
ಇದನ್ನೂ ಓದಿ : ತ್ರಿವರ್ಣ ಧ್ವಜ ನಮ್ಮನ್ನು ಕಾಪಾಡಿತು; ಉಕ್ರೇನ್ ನಿಂದ ಮರಳಿದ ಕಾಫಿನಾಡಿನ ವಿದ್ಯಾರ್ಥಿ ವೈಭವ್
ಶಿವಮೊಗ್ಗದ ರಸ್ತೆಯಲ್ಲಿ ಬರ್ಬರವಾಗಿ ಹತ್ಯೆಗೀಡಾಗಿದ್ದ ಸೀಗೆಹಟ್ಟಿ ಹರ್ಷನ ಮನೆಗೆ ಇಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ಅವರೊಂದಿಗೆ ಭೇಟಿ ನೀಡಿದ ಹಿರಿಯ ಬಿಜೆಪಿ ನಾಯಕ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಹರ್ಷನ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಸರ್ಕಾರದ ವತಿಯಿಂದ ಘೋಷಣೆ ಮಾಡಿದ್ದ 25 ಲಕ್ಷ ರೂಪಾಯಿ ಪರಿಹಾರವನ್ನು ಹಸ್ತಾಂತರ ಮಾಡಲು ಆಗಮಿಸಿದ ಅವರು ಹರ್ಷನ ತಂದೆ ತಾಯಿ ಹಾಗೂ ಸಹೋದರಿಯರಿಗೆ ಧೈರ್ಯ ತುಂಬಿದರು. ಹಣ ಎಂದಿಗೂ ಮುಖ್ಯವಲ್ಲ ಹಿಂದೂ ಮುಖಂಡನಾಗಿ ಬೆಳೆಯುತ್ತಿದ್ದ ನಮ್ಮ ಯುವಕ ಕೊಲೆಯಾಗಿದ್ದಾನೆ. ಆತನಿಲ್ಲದೆ ಇರುವ ಜೀವನವನ್ನು ನಡೆಸಲು ಕುಟುಂಬಸ್ಥರಿಗೆ ಭಗವಂತ ಧೈರ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಇಡೀ ಜಿಲ್ಲೆಯಲ್ಲಿ ಹರ್ಷನ ಸಾವಿನ ನಂತರ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟಾಗಿತ್ತು ನಂತರದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಿ ಶಾಂತಿ ಸುವ್ಯವಸ್ಥೆ ಕಾಪಾಡಲಾಗಿದೆ ಜನರು ಶಾಂತಿಯಿಂದ ವ್ಯವಹರಿಸಬೇಕು ಎಂದು ಕರೆ ನೀಡಿದರು. ಹಾಗೂ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ಆಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಅವರೊಂದಿಗೆ ಸಂಸದ ಬಿ.ವೈ ರಾಘವೇಂದ್ರ, ಸಚಿವ ಕೆ.ಎಸ್ ಈಶ್ವರಪ್ಪ ಸೇರಿದಂತೆ ಅನೇಕ ಹಿರಿಯ ಮುಖಂಡರು ಹಾಗೂ ಪಕ್ಷದ ಸಂಘಟನೆಯ ನಾಯಕರು ಹಾಜರಿದ್ದರು.

0 Comments