ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಮಹಾ ಶಿವರಾತ್ರಿಯ ಅಂಗವಾಗಿ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಸಿದ್ದಾರೆ ಮಾರ್ಗಮಧ್ಯೆ ಭಕ್ತಾದಿಗಳು ಬಿಸಾಡಿದ ಪ್ಲಾಸ್ಟಿಕ್ ಕಸ, ಹಳಸಿದ ಅನ್ನಾಹಾರ, ತ್ಯಾಜ್ಯ ಮುಂತಾದವನ್ನು ತಿಂದು ಅನೇಕ ಜಾನುವಾರುಗಳು ಅಸುನೀಗಿರುವ ಘಟನೆ ನಡೆದಿದೆ.
ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರ್ ; ಓರ್ವ ಮಹಿಳೆ ಸಾವು
ರಾಜ್ಯದ ಅನೇಕ ಭಾಗದ ಜನರು ಪಾದಯಾತ್ರೆಯ ಮೂಲಕ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು,ಜನ್ನಾಪುರ, ಜೇನುಬೈಲು, ಮುತ್ತಿಗೆಪುರ, ಹ್ಯಾಂಡ್ ಪೋಸ್ಟ್, ಹೊರಟ್ಟಿ ಚಕ್ಕಮಕ್ಕಿ, ಬಣಕಲ್, ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ಮಾರ್ಗವಾಗಿ ಧರ್ಮಸ್ಥಳಕ್ಕೆ ಭಕ್ತರು ಪಾದಯಾತ್ರೆ ನಡೆಸುತ್ತಾರೆ. ಈ ಮಾರ್ಗದಲ್ಲಿ ಅವರು ಉಪಯೋಗಿಸಿ ಬಿಸಾಡಿದ ಪ್ಲಾಸ್ಟಿಕ್ ಗ್ಲಾಸ್,ಪ್ಲೇಟ್, ಹಳಸಿದ ಅನ್ನ ಮುಂತಾದವನ್ನು ತಿಂದು ಮೂಡಿಗೆರೆ ಭಾಗದ ಅನೇಕ ಜಾನುವಾರುಗಳು ಸಾವನ್ನಪ್ಪಿವೆ, ಸಾವನ್ನಪ್ಪಿರುವ ಜಾನುವಾರುಗಳಲ್ಲಿ ಹೆಚ್ಚಿನವು ಹಾಲು ಕೊಡುವ ಹಸುಗಳಾಗಿದೆ ಎಂದು ಹಸುವನ್ನು ಕಳೆದುಕೊಂಡ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.
ಅಗತ್ಯವಾಗಿ ಕೈಗೊಳ್ಳಬೇಕಿದ್ದ ಕ್ರಮಗಳನ್ನು ಕೈಗೊಂಡಿದ್ದರೆ ಇಂದು ಈ ದುರ್ಘಟನೆ ಸಂಭವವಾಗುತ್ತಿರಲಿಲ್ಲ. ಮನುಷ್ಯರ ತಪ್ಪಿಗೆ ಮೂಕ ಜೀವಿಗಳು ಬಲಿಯಾಗಿದೆ ಅತೀ ಶೀಘ್ರವಾಗಿ ಹಸುವನ್ನು ಕಳೆದುಕೊಂಡ ಕುಟುಂಬಕ್ಕೆ ಸರ್ಕಾರ ಪರಿಹಾರ ದೊರಕಿಸಬೇಕು ಮುಂದಿನ ವರ್ಷಗಳಲ್ಲಿ ಈ ರೀತಿಯ ಯಾವುದೇ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಶಿವರಾತ್ರಿಯ ಸಂದರ್ಭದಲ್ಲಿ ಮನುಷ್ಯರು ಮಾಡಿದ ಪಾಪ ಮುಕ್ತಿಗಾಗಿ, ಪುಣ್ಯ ಪ್ರಾಪ್ತಿಗಾಗಿ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಾನಕ್ಕೆ ಪಾದಯಾತ್ರೆ ನಡೆಸುತ್ತಾರೆ ಆದರೆ ಈಗ ನಡೆದಿರುವ ಘಟನೆಗೆ ಯಾರು ಹೊಣೆ ಮಾಡಿರುವ ಪಾಪಾ ಕಾರ್ಯವನ್ನು ದೇವರು ಮೆಚ್ಚುವನೇ ಎಂಬ ಪ್ರಶ್ನೆ ಎದುರಾಗಿದೆ.
ಮುಂಬರುವ ವರ್ಷಗಳಲ್ಲಿ ಪರಿಸರಕ್ಕೆ ಹಾನಿಉಂಟಾಗದಂತೆ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಪಾದಯಾತ್ರಿಗಳಿಗೆ ಅನುವು ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

0 Comments