ಮೂಡಿಗೆರೆ : ಪ್ರಚಲಿತ ರಾಜಕೀಯ ಬೆಳವಣಿಗೆ ಹಾಗೂ ಎಸ್.ಡಿ.ಪಿ.ಐ ಪಕ್ಷ ಸಿದ್ಧಾಂತವನ್ನು ಅರಿತು ಮೂಡಿಗೆರೆಯ ಕೆಲ ಯುವಕರು ಎಸ್.ಡಿ.ಪಿ.ಐ ಪಕ್ಷವನ್ನು ಸೇರ್ಪಡೆಗೊಂಡರು.

ಇದನ್ನೂ ಓದಿ : ಮುಖ್ಯಮಂತ್ರಿಗಳ ಪದಕ ಗೌರವಕ್ಕೆ ಭಾಜನರಾದ ಚಿಕ್ಕಮಗಳೂರಿನ ಪ್ರಭು ಸಿ.ಎಸ್

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವತಿಯಿಂದ ಸ್ವಾಭಿಮಾನದ ರಾಜಕೀಯಕ್ಕಾಗಿ ಎಸ್.ಡಿ.ಪಿ.ಐ ಸೇರಿ  ಕಾರ್ಯಕ್ರಮವು ಮೂಡಿಗೆರೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಸ್.ಡಿ.ಪಿ.ಐ  ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ಆರ್ ಭಾಸ್ಕರ್ ಪ್ರಸಾದ್ ಉಪಸ್ಥಿತರಿದ್ದರು.

ಈ ಕುರಿತು ಮಾತನಾಡಿದ ಅವರು ಪ್ರಚಲಿತ ರಾಜಕೀಯ ವಿದ್ಯಮಾನಗಳ ಕುರಿತು ವಿಚಾರ ಮಂಡಿಸಿ ಸ್ವಾಭಿಮಾನದ ರಾಜಕೀಯಕ್ಕಾಗಿ, ಸದೃಢ ಭವಿಷ್ಯ ನಿರ್ಮಾಣಕ್ಕಾಗಿ ಎಸ್.ಡಿ.ಪಿ.ಐ ಸೇರಿರಿ ಎಂದರು.

ಎಸ್.ಡಿ.ಪಿ.ಐ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಗೌಸ್ ಮುನೀರ್ ಪ್ರಾಸ್ತಾವಿಕ ನುಡಿಗಳನ್ನಾಡಿ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಹಾಗೂ ಎಸ್.ಡಿ.ಪಿ.ಐ ಪಕ್ಷದ ಅವಶ್ಯಕತೆಯ ಕುರಿತು ಮಾತನಾಡಿದರು. 

ಎಸ್.ಡಿ.ಪಿ.ಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಯವರಾದ ಬಿ.ಆರ್ ಭಾಸ್ಕರ್ ಪ್ರಸಾದ್ ರವರ ಸಮ್ಮುಖದಲ್ಲಿಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿಕೊಂಡು 35 ಕ್ಕೂ ಅಧಿಕ ಜನರು ಎಸ್.ಡಿ.ಪಿ.ಐ ಸೇರ್ಪಡೆಗೊಂಡರು.

ಈ ಕಾರ್ಯಕ್ರಮದ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಚಿಕ್ಕಮಗಳೂರು ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಅಝ್ಮತ್ ಪಾಷ, ಪ್ರಧಾನ ಕಾರ್ಯದರ್ಶಿ ಜಮೀಲ್ ಖಾನ್, ಜಿಲ್ಲಾ ಕೋಶಾಧಿಕಾರಿ ಕೆ.ಪಿ ಖಾಲಿದ್, ಜಿಲ್ಲಾ ಸಮಿತಿ ಸದಸ್ಯರಾದ ಸಿಕಂದರ್ ಪಾಷ, ಎಸ್.ಡಿ.ಪಿ.ಐ ಮೂಡಿಗೆರೆ ವಿಧಾನಸಭಾ ಅಧ್ಯಕ್ಷರಾದ ಮಹಮ್ಮದ್ ರಫೀಕ್, ಪ್ರಧಾನ ಕಾರ್ಯದರ್ಶಿ ಶರೀಫ್ ಎಂ.ಯು, ಕೋಮು ಸೌಹಾರ್ದ ವೇದಿಕೆಯ ಗೌಸ್ ಮೊಹಿದ್ದೀನ್, ಸಮಾಜ ಸೇವಕರಾದ ಅಲ್ತಾಫ್ ಬಿಳಗುಳ, ದಲಿತ ನಾಯಕರಾದ ಸುಂದ್ರೇಶ್, ಪ್ರಮುಖರಾದ ಸಿಪ್ರಿಯನ್ ರಿಚರ್ಡ್ ಸಿಕ್ವೇರ, ಜಾಬೀರ್, ಜಾಕೀರ್, ಇಲ್ಯಾಸ್, ಆಬೀದ್, ಅಣ್ಣು, ರಫೀಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತನು ಕೊಟ್ಟಿಗೆಹಾರ, ವರದಿಗಾರರು