ಜಯಪುರ : (ನ್ಯೂಸ್ ಮಲ್ನಾಡ್ ವರದಿ) ಕಾಫಿ ಮೂಟೆಗಳನ್ನು ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಜಯಪುರ ಪೊಲೀಸರು ಕಾರ್ಯಾಚರಣೆಯ ಮೂಲಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ : ಅನ್ಯಮತೀಯರಿಗೆ ದೇವಸ್ಥಾನದ ಜಾತ್ರೆಯಲ್ಲಿ ವ್ಯಾಪಾರ ನಡೆಸಲು ಅವಕಾಶ ನೀಡದಂತೆ ಒತ್ತಾಯ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದ ಕಲ್ಲುಗುಡ್ಡೆ ಗ್ರಾಮದ ಅಂದಕಲ್ಲು ನಿವಾಸಿ ರಾಘವೇಂದ್ರ ಅವರಿಗೆ ಸೇರಿದ ಕಾಫಿ ಮೂಟೆಯು ಮಾರ್ಚ್ 16 ರಂದು ಕಳ್ಳತನವಾಗಿತ್ತು  ಈ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಕಾರ್ಯಾಚರಣೆಗಿಳಿದ ಪೊಲೀಸ್ ಇಲಾಖೆಯ ಅಧಿಕಾರಿಗಳು ಕಾಫಿ ಕಳ್ಳನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 

ಬಂಧಿತನನ್ನು ಜಯಪುರದ ಕಲ್ಲುಗುಡ್ಡೆ ಗ್ರಾಮದ ಗಣಪತಿ ಕಟ್ಟೆ ನಿವಾಸಿ ಗೋಪಾಲ ಎಂದು ಗುರುತಿಸಲಾಗಿದೆ. ಈತನಿಗೆ ಮದ್ಯ ಕುಡಿಯುವ ಚಟವಿದ್ದು ಕೆಲಸ ಮಾಡಿಗಳಿಸುತ್ತಿದ್ದ ಹಣದಿಂದ ಕುಡಿಯಲು ದುಡ್ಡು ಕಡಿಮೆಯಾದ ಕಾರಣ ಕಳ್ಳತನ ನಡೆಸಿರುವುದು ಪೊಲೀಸರ ತನಿಖೆಯಿಂದ ಹೊರಬಂದಿದೆ.ಈತನನ್ನು ಅನುಮಾನದ ಮೇರೆಗೆ ಪೊಲೀಸರು ವಿಚಾರಣೆ ನಡೆಸಿದಾಗ ಈ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಬಾಯ್ಬಿಟ್ಟಿದ್ದಾನೆ. 

ಈತನಿಂದ 438 ಕೆ.ಜಿ ತೂಕದ 14 ಕಾಫಿ ಮೂಟೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಬಂಧಿತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕಾರ್ಯಾಚರಣೆಯು ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಎಂ ಹೆಚ್ ಅವರ ಮಾರ್ಗದರ್ಶನದಲ್ಲಿ  ಜಯಪುರ ಪಿಎಸೈ ಜ್ಯೋತಿ ಅವರು  ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಎಎಸೈ ನಾಗರಾಜ, ಎಎಸೈ ನಿಂಗೇಗೌಡ, ಸತೀಶ, ಶ್ರೀಮತಿ ಕಲಾವತಿ, ಆನಂದ ಬಿರಾದರ,ರಘು, ಧರ್ಮರಾಜ್ ಯಶಸ್ವಿಯಾಗಿದ್ದಾರೆ.