ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಶಿಕ್ಷಣ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಟೆಂಡರ್ ಅವಧಿ ನವೀಕರಣದ ನಡುವಿನ 50 ದಿನಗಳ ಸಂಬಳ ನೀಡುತ್ತಿಲ್ಲ ಎಂದು ಆರೋಪಿಸಿ ಸಂಬಳದಿಂದ ವಂಚಿತರಾದ ಸಿಬ್ಬಂದಿಗಳು ತಮ್ಮ ಅಳಲನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ : ಅನ್ಯಮತೀಯರಿಗೆ ದೇವಸ್ಥಾನದ ಜಾತ್ರೆಯಲ್ಲಿ ವ್ಯಾಪಾರ ನಡೆಸಲು ಅವಕಾಶ ನೀಡದಂತೆ ಒತ್ತಾಯ.

ಚಿಕ್ಕಮಗಳೂರು ಜಿಲ್ಲೆಯ ಶಿಕ್ಷಣ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಿದ್ದ 35 ಜನ ನೌಕರರ ಅವಧಿ 31.08.2021 ರಂದು ಮುಗಿದಿದ್ದು ಈ ಸಮಯದಲ್ಲಿ ಡಿ.ವೈ.ಪಿ.ಸಿ ಅವರು ದಿನಾಂಕ 1.09.2021 ರಿಂದ ನೀವುಗಳು ಕಾರ್ಯ ನಿರ್ವಹಣೆ ಮಾಡದೇ ಹೋದಲ್ಲಿ ಹೊಸದಾಗಿ ಕಾಂಟ್ರಾಕ್ಟ್ ಆರಂಭವಾಗುವ ಸಮಯದಲ್ಲಿ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿ ನಮ್ಮ ಬಳಿ ಕೆಲಸ ಮಾಡಿಸಿಕೊಂಡಿದ್ದಾರೆ ಎಂದು ನೌಕರರು ಆರೋಪಿಸಿದ್ದಾರೆ.

ರಾಜ್ಯ ಕಛೇರಿಯಲ್ಲಿ ಈ ಬಗ್ಗೆ ಕೇಳಿದರೆ, ಈ ಸಮಸ್ಯೆಯನ್ನು ಜಿಲ್ಲಾ ಹಂತದಲ್ಲಿ ಸಿಎಸ್ ಮೂಲಕ ಪರಿಹರಿಸಿಕೊಳ್ಳಿ ಎಂದಿದ್ದಾರೆ. ಜಿಲ್ಲಾ ಹಂತದ ಅಧಿಕಾರಿಗಳು ಎಸ್‌ಪಿಡಿ ಕಛೇರಿಯಲ್ಲಿ ಕೇಳಬೇಕು ಎಂದು ಕಾಲಹರಣ ಮಾಡುತ್ತಿದ್ದಾರೆ. ಈ ಬಗ್ಗೆ ಚಿಕ್ಕಮಗಳೂರು ಸಿಎಸ್ ಕಡತ ಮಂಡಿಸಲು ಸೂಚಿಸಿದ್ದರೂ ಸಹ ಜಿಲ್ಲಾ ಎಸ್‌ಎಸ್‌ಎ ಕಛೇರಿಯ ಅಧಿಕಾರಿಗಳು ವಿನಾಕಾರಣ ಮೀನಮೇಷ ಎಣಿಸುತ್ತಾ ಕೂತಿದ್ದಾರೆ. ಅಧಿಕಾರಿಗಳು ಈ ಕುರಿತು ಗಮನ ಹರಿಸಿ ತಕ್ಷಣವೇ ಸಮಸ್ಯೆ ಸರಿಪಡಿಸಬೇಕು. - ಹೆಸರು ಹೇಳಲಿಚ್ಚಿಸದ ನೌಕರ

ರಾಜ್ಯ ಕಛೇರಿಯಲ್ಲಿ ಈ ಬಗ್ಗೆ ಕೇಳಿದರೆ, ಈ ಸಮಸ್ಯೆಯನ್ನು ಜಿಲ್ಲಾ ಹಂತದಲ್ಲಿ ಸಿಎಸ್ ಮೂಲಕ ಪರಿಹರಿಸಿಕೊಳ್ಳಿ ಎಂದಿದ್ದಾರೆ. ಜಿಲ್ಲಾ ಹಂತದ ಅಧಿಕಾರಿಗಳು ಎಸ್‌ಪಿಡಿ ಕಛೇರಿಯಲ್ಲಿ ಕೇಳಬೇಕು ಎಂದು ಕಾಲಹರಣ ಮಾಡುತ್ತಿದ್ದಾರೆ. ಈ ಬಗ್ಗೆ ಚಿಕ್ಕಮಗಳೂರು ಸಿಎಸ್ ಕಡತ ಮಂಡಿಸಲು ಸೂಚಿಸಿದ್ದರೂ ಸಹ ಜಿಲ್ಲಾ ಎಸ್‌ಎಸ್‌ಎ ಕಛೇರಿಯ ಅಧಿಕಾರಿಗಳು ವಿನಾಕಾರಣ ಮೀನಮೇಷ ಎಣಿಸುತ್ತಾ ಕೂತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ನೌಕರರಿಗೆ ವೇತನ ದೊರಕಿಸುವ ಸಲುವಾಗಿ ಎಲ್ಲಾ ರೀತಿಯ ಹೋರಾಟಗಳನ್ನು ನಾವು ಮಾಡುತ್ತಿದ್ದೇವೆ. ಈ ಕುರಿತು ಚರ್ಚೆ ನಡೆಸುತ್ತಿದ್ದು ಎರಡು ದಿನಗಳಲ್ಲಿ ಸಿಇಓ ಅವರ ಬಳಿ ಈ ಕುರಿತು ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು - ಬಿ.ವಿ ಮಲ್ಲೇಶಪ್ಪ ಡಿಡಿಪಿಐ ಚಿಕ್ಕಮಗಳೂರು

ಕೋವಿಡ್ ನ ಕ್ಲಿಷ್ಟಕರ ಸಮಯದಲ್ಲಿ ಬೇರೆಲ್ಲೂ ಕೆಲಸ ಕಾರ್ಯಗಳು ಲಭಿಸುವ ಸೂಚನೆಗಳಿರದ ಕಾರಣ 50 ದಿನಗಳ ಕಾಲ ಈ ಎಲ್ಲಾ ಕಾರ್ಮಿಕರು ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ ಹಾಗೂ ಕಾರ್ಯ ನಿರ್ವಹಣೆ ಮಾಡಿದ 50 ದಿನಗಳ ಸಂಬಳವನ್ನು ನೀಡುವಂತೆ ಕೋರಿದಾಗ ನಿಮ್ಮನ್ನು ಅಂದೇ ಕೆಲಸದಿಂದ ತೆಗೆಯಲಾಗಿತ್ತು ನಿಮಗೆ ಕೆಲಸ ಮಾಡಲು ಕರೆದವರಾರು, ನಿಮ್ಮ ಅಗತ್ಯಕ್ಕೆ ನೀವು ಕೆಲಸ ಮಾಡಿದ್ದೀರಿ ಎಂಬ ಮಾತುಗಳನ್ನು ಡಿ.ವೈ.ಪಿ.ಸಿ ಆಡಿದ್ದಾರೆ ಎಂದು ಹೊರಗುತ್ತಿಗೆ ನೌಕರರು ದೂರಿದ್ದಾರೆ. 

ಈ ಕುರಿತಾಗಿ ಅನೇಕ ಶಾಸಕರು ಹಾಗೂ ರಾಜ್ಯದ ಗೃಹ ಸಚಿವರ ಮೂಲಕವೂ ಕರೆ ಮಾಡಿಸಿ ಈ ಕುರಿತು ತಿಳಿಸಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಲಭಿಸಬೇಕಿದ್ದ ವೇತನವನ್ನು ತಡೆಹಿಡಿದು, ಕಾಲಹರಣ ಮಾಡುತ್ತಿದ್ದಾರೆ ಎಂದು ನೌಕರರು ದೂರಿದ್ದಾರೆ. ಈ ಕುರಿತು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೌಕರರು ಕೋರಿದ್ದಾರೆ. ಮಾರ್ಚ್ 31 ರ ಒಳಗೆ ವೇತನ ನೌಕರರ ಖಾತೆಗೆ ಬೀಳದೆ ಹೋದಲ್ಲಿ ರಾಜ್ಯ ಕಛೇರಿಗೆ ಈ ಹಣ ಹಿಂತಿರುಗಿ ಹೋಗಲಿದೆ ಆದಕಾರಣ ಈ ಸಮಸ್ಯೆಯ ಕುರಿತು ಸೂಕ್ತ ಕ್ರಮಕೈಗೊಂಡು ವೇತನ ದೊರಕಿಸಿಕೊಡಬೇಕೆಂದು ಜನಪ್ರತಿನಿಧಿಗಳನ್ನು ಹಾಗೂ ಸರ್ಕಾರವನ್ನು ನೌಕರರು ಮನವಿ ಮಾಡಿದ್ದಾರೆ.