ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) 70 ವರ್ಷದ ವಯೋ ವೃದ್ದನೋರ್ವ ಹುಡುಗಿಯರ ಚಟಕ್ಕೆ ಬಿದ್ದು ಅನೇಕ ಕಡೆ ಕಳ್ಳತನ ನಡೆಸಿ ಪ್ರಸ್ತುತ ಪೊಲೀಸರ ಅತಿಥಿಯಾಗಿದ್ದಾನೆ. 

ಇದನ್ನೂ ಓದಿ : ಅರಣ್ಯಕ್ಕೆ ಬೆಂಕಿ ಹಚ್ಚಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ ; ಹತ್ತಾರು ಎಕರೆ ಅರಣ್ಯಪ್ರದೇಶ ಭಸ್ಮ

ಚಿಕ್ಕಮಗಳೂರು ಮೂಲದ 70 ವರ್ಷ ವಯಸ್ಸಿನ ರಮೇಶ್ ಎಂಬ ವ್ಯಕ್ತಿ ಎರಡು ಮದುವೆಯಾಗಿ ಮೂವರು ಮಕ್ಕಳ ತಂದೆಯಾಗಿದ್ದಾನೆ. 12 ವರ್ಷಗಳ ಹಿಂದೆ ಮನೆ ಬಿಟ್ಟು ತಮಿಳುನಾಡಿಗೆ ತೆರಳಿದ್ದ ಈತ ತಮಿಳುನಾಡಿನಲ್ಲೂ ಮನೆಗಳ್ಳತನ ಎಸಗಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ. ಈತನನ್ನು ಬಂಧಿಸಿ ಜೈಲಿನಲ್ಲಿರಿಸಿದ್ದ ತಮಿಳುನಾಡಿನ ಪೊಲೀಸರು ಕೆಲ ಸಮಯದ ನಂತರ ಜೈಲಿನಿಂದ ಬಿಡುಗಡೆ ಮಾಡಿದ್ದರು. ಬಿಡುಗಡೆಯ ನಂತರ ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ನೆಲೆಸಿದ್ದ ಈ ಕಳ್ಳನು ನಂತರದಲ್ಲೂ ತನ್ನ ಕೈಚಳಕ ಮುಂದುವರಿಸಿದ್ದಾನೆ.

ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸುವ ವೇಳೆ ಈತನ ಕೃತ್ಯಗಳು ಸಿಸಿಟಿವಿ ಕ್ಯಾಮರಾದ ಮೂಲಕ ಬೆಳಕಿಗೆ ಬಂದಿದೆ. ಕೂಡಲೇ ಚುರುಕಾಗಿ ಈತನನ್ನು ಠಾಣೆಗೆ ಕರೆಸಿ ವಿಚಾರಣೆ ಆರಂಭಿಸಿದಾಗ ಈತನಿಗಿದ್ದ ಹುಡುಗಿಯರ ಚಟಗಳು ಹಾಗೂ ಆ ಕಾರಣಕ್ಕಾಗಿ ಕಳ್ಳತನ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. 

ವೃದ್ಧನನ್ನು ವಿಚಾರಣೆ ನಡೆಸಿದ ಬೆಂಗಳೂರಿನ ಸದ್ದುಗುಂಟೆ ಪೊಲೀಸರು ಆತನ ಬಳಿಯಿದ್ದ ಬಂಗಾರವನ್ನು ವಶಕ್ಕೆ ಪಡೆದಿದ್ದಾರೆ ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದು ಸಂಪೂರ್ಣ ತನಿಖೆಯ ನಂತರವಷ್ಟೇ ಹೆಚ್ಚಿನ ಮಾಹಿತಿ ದೊರೆಯಬೇಕಿದೆ.