ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಬೈಕ್ ಹಾಗೂ ಕಾರಿನ ನಡುವೆ ನಡೆದ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಇಬ್ಬರು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ : ಬಡಾಮಕಾನ್ ಜಾಗ ಅಳತೆ ವಿಚಾರ : ಮಸೀದಿ ಕಮಿಟಿ ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ. ಮುಸ್ಲಿಂ ಮುಖಂಡರ ಪ್ರತಿಭಟನೆ, ಚಿಕ್ಕಮಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಚಿಕ್ಕಮಗಳೂರು ಜಿಲ್ಲೆಯ ಉದ್ದೇಬೋರನ ಹಳ್ಳಿಯಲ್ಲಿ ಸಂಭವಿಸಿದ ಬೈಕ್ ಹಾಗೂ ಕಾರಿನ ನಡುವಿನ ಅಪಘಾತದಲ್ಲಿ ಕಾರ್ತಿಕ್ ಎಂಬ 22 ವರ್ಷ ಪ್ರಾಯದ ಯುವಕ ದುರ್ಮರಣಹೊಂದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. 

ಚಿಕ್ಕಮಗಳೂರು ಜಿಲ್ಲೆಯ ನಾಗರಾಳು ಸಮೀಪ ನಡೆದ ಅಪಘಾತದಲ್ಲಿ ಮಹಿಳೆಯೋರ್ವರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು ಇನ್ನಷ್ಟೇ ಹೆಚ್ಚಿನ ಮಾಹಿತಿಗಳು ದೊರೆಯಬೇಕಿದೆ. 

ಇಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಮ ಪಂಚಾಯತ್ ಸಮೀಪದ ಉಳುವೆ ಶಾಲೆಯ ಬಳಿಯೂ ಲಾರಿ ಹಾಗೂ ಕಾರಿನ ನಡುವೆ ಮುಖಾಮುಖಿಯಾಗಿ ಅಪಘಾತ ನಡೆದಿತ್ತು. 

ಮಲೆನಾಡು ರಸ್ತೆಗಳು ಹೆಚ್ಚಿನ ತಿರುವುಗಳನ್ನು ಹೊಂದಿರುವ ಕಾರಣ ವಾಹನ ಸವಾರರು ರಸ್ತೆ ನಿಯಮಗಳನ್ನು ಪಾಲಿಸಿಕೊಂಡು ಅತೀ ವೇಗವಾಗಿ ವಾಹನಗಳ ಚಾಲನೆ ಮಾಡದೇ ಸುರಕ್ಷಿತವಾಗಿ ವಾಹನಗಳನ್ನು ಚಲಾಯಿಸಬೇಕು ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಿದ್ದಾರೆ.