ಕಡೂರು : (ನ್ಯೂಸ್ ಮಲ್ನಾಡ್ ವರದಿ) ಗ್ಯಾಸ್ ಕಟರ್ ಬಳಸಿಕೊಂಡು ಮದ್ಯದಂಗಡಿಯ ರೋಲಿಂಗ್ ಶಟರ್ ಕಟ್ ಮಾಡಿ ಮದ್ಯ ಹಾಗೂ ಸಿಸಿಟಿವಿ ಕ್ಯಾಮೆರಾ ದೋಚಿದ್ದ ಕಳ್ಳರನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಬಂಧಿಸಿದ್ದಾರೆ.
ಇದನ್ನೂ ಓದಿ : ಚಿಕ್ಕಮಗಳೂರು : ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
ಚಿಕ್ಕಮಗಳೂರು ಜಿಲ್ಲೆಯ ಕಡೂರು ಸಮೀಪದ ಸಖರಾಯಪಟ್ಟಣ ಜೋಡಿಹೋಚಿಹಳ್ಳಿಯಲ್ಲಿದ್ದ ಬಾರ್ ಕಳ್ಳತನ ನಡೆಸಿದ್ದ ಕಳ್ಳರು ಗ್ಯಾಸ್ ಕಟರ್ ಸಹಾಯದಿಂದ ಅಂಗಡಿಯ ರೋಲಿಂಗ್ ಶಟರ್ ನ್ನು ಕಟ್ ಮಾಡಿ ಒಳನುಗ್ಗಿ ಅಪಾರ ಪ್ರಮಾಣದ ಮದ್ಯ ಹಾಗೂ ಅಂಗಡಿಗೆ ಹಾಕಲಾಗಿದ್ದ ಸಿಸಿಟಿವಿ ಕ್ಯಾಮೆರಾ ಮತ್ತು ಡಿವಿಆರ್ ಕಳ್ಳತನ ನಡೆಸಿದ್ದರು.
ಈ ಕುರಿತು ಕಳ್ಳರನ್ನು ಸೆರೆ ಹಿಡಿಯುವ ಸಲುವಾಗಿ ಕಾರ್ಯಾಚರಣೆಗಿಳಿದಿದ್ದ ಪೊಲೀಸ್ ಇಲಾಖೆ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಸೆರೆ ಹಿಡಿದಿರುವ ಸಖರಾಯಪಟ್ಟಣ ಪೊಲೀಸರು ಈ ಕೃತ್ಯಕ್ಕೆ ಬಳಸಿದ್ದ ಒಂದು ಸ್ಕಾರ್ಪಿಯೋ ಕಾರ್, ಗ್ಯಾಸ್ ಕಟರ್, ಸಿಸಿಟಿವಿ, ಡಿವಿಆರ್, ಮತ್ತು ಕಳವು ಮಾಡಿ ಮಾರಾಟ ಮಾಡಿದ್ದ ಮದ್ಯದ 30,000 ಹಣವನ್ನು ವಶಕ್ಕೆ ಪಡೆದಿದ್ದಾರೆ.
ಈ ಕಾರ್ಯಾಚರಣೆಯು ಪಿಎಸೈ ಸಖರಾಯಪಟ್ಟಣ ಅವರ ನೇತೃತ್ವದ ಪೊಲೀಸರ ತಂಡವು ಬೇಧಿಸುವಲ್ಲಿ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಇಲಾಖೆಯ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿವರ್ಗದವರನ್ನು ಪೊಲೀಸ್ ಅಧೀಕ್ಷಕರು ಶ್ಲಾಘನೆ ಮಾಡಿದ್ದಾರೆ ಹಾಗೂ ಈ ತಂಡಕ್ಕೆ ಬಹುಮಾನ ಘೋಷಣೆ ಮಾಡಿರುತ್ತಾರೆ ಎಂದು ತಿಳಿದುಬಂದಿದೆ.

0 Comments