ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಕನ್ನಡ ಚಿತ್ರರಂಗದ ಹೆಸರಾಂತ ನಟ ಪುನೀತ್ ರಾಜಕುಮಾರ್ ಅವರು ಕಿರಿಯರಿಂದ ಹಿರಿಯರ ವರೆಗೂ ಎಲ್ಲರಿಗೂ ಆದರ್ಶಪ್ರಾಯರು, ಅವರ ಬಾಳಿನ ಹಾದಿಯನ್ನು ಪ್ರೇರಣೆಯಾಗಿ ಪಡೆದುಕೊಂಡು ಅವರ ಜೀವನವನ್ನು ಮಾರ್ಗದರ್ಶನವನ್ನಾಗಿ ಮಾಡಿಕೊಂಡು ಅನೇಕರು ಜೀವನ ನಡೆಸುತ್ತಿದ್ದಾರೆ.
ಅಂತೆಯೇ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಗೌರವಾನ್ವಿತ ನಟ ಪುನೀತ್ ರಾಜಕುಮಾರ್ ಅವರ ಜನ್ಮದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಶೃಂಗೇರಿಯ ಗುಬ್ಬಗೋಡು ಮಿಥುನ್ ಆಚರಣೆ ಮಾಡಿದರು. ಗುಬ್ಬಗೊಡು ಪ್ರಾಥಮಿಕ ಹಾಗೂ ಪ್ರೌಢಶಾಲೆಯ 230 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು ವಿತರಣೆ ಮಾಡುವ ಮೂಲಕ ಶ್ರೇಷ್ಠ ನಟ, ಮರೆಯಲಾರದ ಮಾಣಿಕ್ಯ ದಿವಂಗತ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ಆಚರಣೆಯನ್ನು ಮಾಡಿದರು.
ಶೃಂಗೇರಿ ತಾಲೂಕಿನಲ್ಲಿರುವ ಹಳ್ಳಿ ಭಾಗದ ಶಾಲೆಗಳಾದ ಗುಬ್ಬಗೋಡು, ಯಡದಾಳು,ಸಿಂದೋಡಿ, ಸಿರಿಮನೆ, ಕೋಗಿನ ಬೈಲು, ಮೀಗಾ, ಹಗ್ಗುರುಡಿ, ಅಸನಬಾಳು ವೈಕುಂಟಪುರ, ತೆಕ್ಕೂರು ಮುಂತಾದ ಶಾಲೆಗಳಿಗೆ ತೆರಳಿ ನೋಟ್ ಬುಕ್ ಹಾಗೂ ಪೆನ್ ವಿತರಣೆ ನಡೆಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮಿಥುನ್, ಬಾಲ್ಯದಿಂದಲೇ ವಿದ್ಯಾರ್ಥಿಗಳು ನಮ್ಮನ್ನೆಲ್ಲ ಅಗಲಿರುವ ಕನ್ನಡದ ಶ್ರೇಷ್ಠ ನಟ ಪುನೀತ್ ರಾಜಕುಮಾರ್ ಅವರ ಆದರ್ಶಗಳನ್ನು ಜೀವನಕ್ಕೆ ಅಳವಡಿಸಿಕೊಳ್ಳಬೇಕು, ಅವರಂತೆಯೇ ಸಾಕಾರಮೂರ್ತಿಯಾಗಿ ಇನ್ನೊಬ್ಬರ ಕಷ್ಟಗಳಿಗೆ ನೋವಿಗೆ ಸ್ಪಂದಿಸಬೇಕು, ಎಲ್ಲರ ಹಿತಕ್ಕಾಗಿ ಕಾರ್ಯಗಳನ್ನು ಮಾಡಬೇಕೆಂದರು ಹಾಗೂ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.
ನೋಟ್ ಬುಕ್ ಹಾಗೂ ಪೆನ್ನುಗಳ ವಿತರಣಾ ಕಾರ್ಯದಲ್ಲಿ ಮಿಥುನ್ ಅವರ ಸ್ನೇಹಿತರಾದ ಸಚಿನ್ ಗುಬ್ಬಗೋಡು, ಗಣೇಶ್ ರಾಜ್, ಗಣೇಶ್ ಜಿ.ಎಸ್ ಇದ್ದು ಬುಕ್ಕು ಪೆನ್ನುಗಳ ವಿತರಣೆಗೆ ಸಹಕಾರ ನೀಡಿದರು.

.jpeg)
.jpeg)
.jpeg)

0 Comments