ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಬಾಳೆಹೊನ್ನೂರಿನ ಖಾಂಡ್ಯ ಹೋಬಳಿಯ ಹುಣಸೇಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಇಂದು ಮಾತೃಭೂಮಿ ಸೇವಾ ಸಂಘದ ಪದಾಧಿಕಾರಿಗಳು ಬ್ಯಾಗ್ ವಿತರಣೆ ನಡೆಸಿದರು.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ವ್ಯಾಪ್ತಿಯ ಹುಣಸೆಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮಾತೃಭೂಮಿ ಸೇವಾ ಸಂಘದ ಸದಸ್ಯರು ವಿದ್ಯಾರ್ಜನೆಗೆ ಅನುಕೂಲವಾಗುವ ದೃಷ್ಟಿಯಿಂದ ಹಾಗೂ ವಿದ್ಯೆ ಕಲಿಕೆಗೆ ಪೂರಕವಾಗುವ ಹಿತದೃಷ್ಟಿಯಿಂದ ಬ್ಯಾಗ್ ವಿತರಣೆ ನಡೆಸಿದರು.
ಬೆಂಗಳೂರಿನ ಶ್ರೀಯುತ ಸತ್ಯಶಂಕರ್ ಅವರು ಕಲ್ಪಿಸಿದ ಧನಸಹಾಯದಿಂದ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ನಡೆಸಲಾಗಿದೆ ಎಂದು ಮಾತೃಭೂಮಿ ಸೇವಾ ಸಂಘದ ಸದಸ್ಯರು ತಿಳಿಸಿದರು ಹಾಗೂ ದಾನಿಗಳಾದ ಶ್ರೀ ಸತ್ಯಾಶಂಕರ್ ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಸಮರ್ಪಿಸಿದರು.
ಈ ಕಾರ್ಯಕ್ರಮದ ಮೊದಲು ಸ್ಥಳೀಯ ಗ್ರಾಮಸ್ಥರು ಶ್ರಮದಾನ ಮಾಡುವ ಮೂಲಕ ಸಾರ್ವಜನಿಕ ತಂಗುದಾಣವನ್ನು ಸ್ವಚ್ಛಗೊಳಿಸಿ ಸುಣ್ಣ ಬಣ್ಣ ಹಚ್ಚಿದರು.
ಈ ಸಂದರ್ಭದಲ್ಲಿ ಮಾತೃಭೂಮಿ ಸೇವಾ ಸಂಘದ ಸದಸ್ಯರುಗಳಾದ ರಜಿತ್ ಗುಡ್ಡೇಕೊಪ್ಪ, ಸದಾಶಿವ ಹುಣಸೇಹಳ್ಳಿ, ರಂಜಿತ್ ಮಾಗಲು, ಕಥೆಗಾರರಾದ ಗೋಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

0 Comments