ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಕೊಪ್ಪದಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆದ ರಮೇಶ್ ಬೇಗಾರ್ ನೇತೃತ್ವದ ಮಲೆನಾಡು ಉತ್ಸವ ಕಾರ್ಯಕ್ರಮವು ನಿನ್ನೆ ಸಮಾರೋಪ ಕಂಡಿತು.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ಬಿಜಿಎಸ್ ವೆಂಕಟೇಶ್ವರ ವಿದ್ಯಾಮಂದಿರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆದವು, ಪ್ರತಿದಿನವೂ ಸಂಜೆ ಆರು ಗಂಟೆಗೆ ಕಿಕ್ಕಿರಿದು ಆಗಮಿಸಿದ ಜನರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆನಂದಿಸಿದರು.
ಇದನ್ನೂ ಓದಿ : ಶೃಂಗೇರಿಯಲ್ಲಿ ಯಶಸ್ವಿಯಾಗಿ ನಡೆದ ಪೋಲಿಯೋ ಲಸಿಕೆ ಅಭಿಯಾನ
ಕಾರ್ಯಕ್ರಮದ ಉದ್ಘಾಟನೆಯನ್ನು ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ಅವರು ನೆರವೇರಿಸಿದರು, ಈ ಕಾರ್ಯಕ್ರಮದ ಆಯೋಜನೆ ಅಪ್ಪಟ ಮಲೆನಾಡಿನ ಶೈಲಿಯಲ್ಲಿ ನಡೆಸಲಾಗಿತ್ತು. ಈ ಕಾರ್ಯಕ್ರಮದ ವಿಶೇಷವೆಂದರೆ ರಮೇಶ್ ಬೇಗಾರ್ ಅವರು ವೇದಿಕೆಯ ಮೇಲೆ ಕುಳಿತೇ ಕಾರ್ಯಕ್ರಮದ ನಿರೂಪಣೆ ನಡೆಸುತ್ತಿದ್ದದು.
ಈ ಕಾರ್ಯಕ್ರಮದಲ್ಲಿ ಮಲೆನಾಡಿನ ಅನೇಕರನ್ನು ಸನ್ಮಾನಿಸಿ ಗೌರವಿಸಲಾಯಿತು ಶೃಂಗೇರಿ ಜಗದ್ಗುರುಗಳ ಆಪ್ತ ಸಹಾಯಕರಾದ ಶ್ರೀ ಕೃಷ್ಣಮೂರ್ತಿಗಳು ಉದ್ಯಮಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ತುಮಾಖಾನೆ ಸುಧಾಕರ್ ಎಸ್ ಶೆಟ್ಟಿ, ಕೊಪ್ಪದ ಹೆಸರಾಂತ ಪ್ರಶಮನೀ ಆಸ್ಪತ್ರೆಯ ವೈದ್ಯರಾದ ಡಾ. ಉದಯಶಂಕರ್ ಒಳಗೊಂಡಂತೆ ಮಲೆನಾಡಿನ ಅನೇಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಕುರಿತು ಮಾತನಾಡಿದ ಸುಧಾಕರ್ ಎಸ್ ಶೆಟ್ಟಿ ಅವರು ರಮೇಶ್ ಬೇಗಾರ್ ಓರ್ವ ಹೆಸರಾಂತ ಕಲಾವಿದ ಅವರಲ್ಲಿ ಕಲೆಯನ್ನು ಬೆಳೆಸುವ ಹಾಗೂ ಪ್ರೋತ್ಸಾಹಿಸುವ ಉತ್ತಮ ಮನೋಭಾವನೆಯಿದೆ ಎಲ್ಲರೂ ಅವರನ್ನು ಸದಾ ಬೆಂಬಲಿಸಬೇಕು ಎಂದರು. ಮಲೆನಾಡಿನ ಸೊಬಗನ್ನು ಅದರ ಗರಿಮೆಯನ್ನು ರಮೇಶ್ ಬೇಗಾರ್ ಒಂದಿಲ್ಲೊಂದು ಮಾರ್ಗದ ಮೂಲಕ ಹೆಚ್ಚಿಸುತ್ತಿದ್ದಾರೆ ಎಲ್ಲರೂ ಅವರನ್ನು ಪ್ರೋತ್ಸಾಹಿಸಬೇಕು ಎಂದರು. ಈ ರೀತಿಯ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಮಲೆನಾಡಿಗರನ್ನು ಒಗ್ಗೂಡಿಸಿ ಮಲೆನಾಡಿನ ಸೊಬಗನ್ನು ಹಾಗೂ ಗರಿಮೆಯನ್ನು ಎಲ್ಲೆಡೆ ಪಸರಿಸುವಂತೆ ಮಾಡಬೇಕೆಂದರು.
ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಸೇರಿದಂತೆ ಸ್ಥಳೀಯರು, ಕಲಾಭಿಮಾನಿಗಳು ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆನಂದಿಸಿದರು.

0 Comments