ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಕಳೆದ ನಾಲ್ಕೈದು ವರ್ಷಗಳಿಂದ ಪರಸ್ಪರ ಪ್ರೀತಿಸಿದ್ದ ಪ್ರೇಮಿಗಳ ಜೋಡಿಯು ಪ್ರೀತಿಸಿದ ಯುವಕ ಕೈಕೊಟ್ಟ ಕಾರಣಕ್ಕಾಗಿ ಆತನ ಮದುವೆ ನಿಶ್ಚಯವಾದ ದಿನದಂದೇ ನೇಣಿಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.



ಇದನ್ನೂ ಓದಿ : ಶೃಂಗೇರಿ : ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿಯಲ್ಲಿ ಡಿಲೀಟ್ ಆದ ಇ - ಸ್ವತ್ತುಗಳ ಕುರಿತು ಸಾರ್ವಜನಿಕರಿಂದ ಅಧಿಕಾರಿಗಳಿಗೆ ಪ್ರಶ್ನೆ


ಶಿವಮೊಗ್ಗದ ನಿವಾಸಿಗಳಾಗಿದ್ದ ಮುರಳಿ ಹಾಗೂ ರೂಪಾ ಎಂಬ ಪ್ರೇಮಿಗಳ ಜೋಡಿ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು, ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದ ಈ ಜೋಡಿಯು ಜಾತಿಯಲ್ಲಿ ಬೇರೆಯಾಗಿದ್ದರು. ಈ ಕಾರಣಕ್ಕಾಗಿಯೇ ಮನೆಯಲ್ಲಿ ಜಗಳ ನಡೆದಿತ್ತು. ಹಿಂದೊಮ್ಮೆ ಈ ಕುರಿತಾಗಿಯೇ ರೂಪ ವಿಷ ಸೇವಿಸಿದ್ದರು ನಂತರದಲ್ಲಿ ಆಸ್ಪತ್ರೆಗೆ ದಾಖಲಿಸಿ ಔಷದೋಪಚಾರ ಮಾಡಿದ ಕಾರಣಕ್ಕಾಗಿ ಚೇತರಿಸಿಕೊಂಡಿದ್ದರು.

ಈ ಘಟನೆಯಿಂದ ಎಚ್ಚೆತ್ತ ಕುಟುಂಬಸ್ಥರು ಜಾತಿ ಯಾವುದಾದರೂ ಪರವಾಗಿಲ್ಲ, ಮುದ್ದಿನ ಮಗಳು ಸುಖವಾಗಿ ಜೀವನ ನಡೆಸಿದರೆ ಅಷ್ಟೇ ಸಾಕೆಂದು ತೀರ್ಮಾನಿಸಿ ಮುರುಳಿ ಅವರೊಂದಿಗೆ ಮದುವೆ ಮಾಡಲು ಮುಂದಾಗಿದ್ದರು.

ಪ್ರೀತಿಸಿದ ರೂಪಾಳನ್ನು ಬಿಟ್ಟು ಬೇರೊಬ್ಬಳನ್ನು ವರಿಸಿದ ಮುರುಳಿ : 
ಇತ್ತ ಕುಟುಂಬಸ್ಥರು ರೂಪಾ ಪ್ರೀತಿಸಿದ ಯುವಕ ಮುರಳಿಯೊಂದಿಗೆ ಮದುವೆ ಮಾಡಲು ಮುಂದಾಗಿದ್ದರೆ, ನಿನ್ನೆ ಭಾನುವಾರ ಬೇರೊಂದು ಯುವತಿಯ ಕೊರಳಿಗೆ ಮುರುಳಿ ತಾಳಿ ಕಟ್ಟಿದ. ಈ ಮದುವೆಯ ವಿಚಾರವನ್ನು ತಿಳಿದು ಬೇಸರಕ್ಕೀಡಾದ ಯುವತಿ ರೂಪ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ವಿಚಾರ ತಿಳಿಯುತ್ತಿದ್ದಂತೆ ಮದುವೆ ಮಂಟಪದಿಂದ ಮದುಮಗ ಮುರುಳಿ ಎಸ್ಕೇಪ್ ಆಗಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಪೇಟೆ ಪೊಲೀಸರು ಮುರಳಿಯನ್ನು ಸೆರೆ ಹಿಡಿಯುವ ಸಲುವಾಗಿ ಬಲೆ ಬೀಸಿದ್ದಾರೆ.