ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನರಸಿಂಹರಾಜಪುರದಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಹಲಾಲ್ ಮಾಂಸ ನಿಷೇಧದ ಕುರಿತು ಕರಪತ್ರ ಹಂಚಿದ ಬಜರಂಗದಳದ ಕಾರ್ಯಕರ್ತರು ಹಿಂದೂಗಳ ಅಂಗಡಿಯಲ್ಲಿ ವ್ಯವಹರಿಸುವಂತೆ ಮನವಿ

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ದಾವಣ ಗ್ರಾಮದ ಅರಣ್ಯ ಪ್ರದೇಶದಲ್ಲಿ ಯುವಕ ಕಿಶೋರ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವೃತ್ತಿಯಲ್ಲಿ ಟ್ರಾಕ್ಟರ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಿಶೋರ್ ಎಂದಿನಂತೆಯೇ ಟ್ರಾಕ್ಟರ್ ಚಾಲನೆ ಮಾಡಲು ಹೋಗುವುದಾಗಿ ಮನೆಯಲ್ಲಿ ತಿಳಿಸಿ ಕೆಲಸಕ್ಕೆ ಹೋಗಿದ್ದರು.

ಕಿಶೋರ್ ಅವರ ತಾಯಿ ಕಟ್ಟಿಗೆ ತರಲು ಕಾಡಿಗೆ ಹೋದಾಗ ಮಗ ಕಿಶೋರ್ ಕುಮಾರ್ ಟವಲ್ ನಿಂದ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

ಕಿಶೋರ್ ಬೇಸರದಿಂದ ಸದಾ ಕೂಡಿರುವುದಾಗಿ ತಿಳಿಸಿದ್ದು, ಜಿಗುಪ್ಸೆ ಹೊಂದಿ ಈ ನಿರ್ಧಾರ ಕೈಗೊಂಡಿರಬಹುದು ಎಂದು ದೂರಿನ ಅನ್ವಯ ಅಂದಾಜಿಸಲಾಗಿದೆ. 

ಈ ಕುರಿತು ಮೃತ ಕಿಶೋರ್ ಕುಮಾರ್ ಅವರ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಗೆ ನಿಖರ ಕಾರಣಗಳೇನು ಎಂದು ತನಿಖೆ ನಡೆಸುತ್ತಿದ್ದಾರೆ.