ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಸಿಲಿಂಡರ್ ಬೆಲೆ ಏರಿಕೆ ಹಾಗೂ ಕೇಂದ್ರ ಸರ್ಕಾರದ ವಿರುದ್ದವಾಗಿ ಇಂದು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ : ತರಕಾರಿ ಸಾಗಾಣಿಕೆ ವಾಹನ ಹಾಗೂ ಬೈಕಿನ ನಡುವೆ ಅಪಘಾತ :ಇಬ್ಬರು ಸಾವು
ಚಿಕ್ಕಮಗಳೂರಿನಲ್ಲಿ ಸಿಲಿಂಡರ್ ಗೆ ಹಾರ ಹಾಕಿ ಪ್ರತಿಭಟಿಸಿದ ಕಾರ್ಯಕರ್ತರು ಅಚ್ಚೇ ದಿನ್ ಕಹಾ ಆಗಯಾ ಎಂಬ ಘೋಷಣೆಯನ್ನು ಕೂಗುತ್ತಾ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡುತ್ತಾ ಬಂದಿದೆಯೇ ಹೊರತು ಯಾವುದೇ ಉತ್ತಮ ಆಡಳಿತವನ್ನು ನೀಡಿಲ್ಲ ಕೊರೊನಾ ಅವಧಿಯಿಂದ ಇಲ್ಲಿಯವರೆಗೂ ಕೂಡ ಜನರನ್ನು ತಲುಪುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾದ ಬಿ.ಎಂ ಸಂದೇಶ್ ಮಾತನಾಡಿದರು. ಬೆಲೆ ಏರಿಕೆ ಸೇರಿದಂತೆ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮಾಡಲು ಕಾಂಗ್ರೆಸ್ ಸಶಕ್ತವಾಗಿದೆ ಎಂದರು.
ಕೊರೋನದಿಂದ ಮೃತಪಟ್ಟವರಿಗೆ ಹಣ ನೀಡಲು, ನೆರೆ ಪರಿಹಾರ, ಲಾಕ್ಡೌನ್ ಪರಿಹಾರ ಸೇರಿದಂತೆ ಜನರ ಕಷ್ಟಗಳಿಗೆ ಸ್ಪಂದಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಪೆಟ್ರೋಲ್ ಡೀಸೆಲ್ ಗ್ಯಾಸ್ ಸೇರಿದಂತೆ ಎಲ್ಲದರ ಬೆಲೆ ಏರಿಕೆಗೆ ಮಾತ್ರ ಈ ಸರಕಾರ ಸಮರ್ಥವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸಾಮಾನ್ಯ ವರ್ಗದ ಜನರು ಈ ಸರ್ಕಾರದ ಅವಧಿಯಲ್ಲಿ ಬದುಕುವುದು ಅತ್ಯಂತ ದುಸ್ತರವಾಗಿದೆ, ಕೆಲವೇ ದಿನಗಳಲ್ಲಿ ಜನ ಈ ಕುರಿತು ತಕ್ಕ ಶಾಸ್ತಿ ಮಾಡಿ ಪಾಠ ಕಲಿಸುತ್ತಾರೆ ಎಂದರು.
ಈ ಪ್ರತಿಭಟನೆಯ ಸಂದರ್ಭದಲ್ಲಿ ಕಾಂಗ್ರೆಸ್ನ ಜಿಲ್ಲಾ ಸೋಶಿಯಲ್ ಮೀಡಿಯಾ ಕಾರ್ಯಾಧ್ಯಕ್ಷರಾದ ಕಾರ್ತಿಕ್ ಜಿ ಚೆಟ್ಟಿಯಾರ್, ಭರತ್ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.





0 Comments