ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯ ವಿದ್ಯಾರಣ್ಯಪುರ ಗ್ರಾಮಪಂಚಾಯತ್ ವ್ಯಾಪ್ತಿಯ ಹಂದಿಗೋಡು ಸುಧಾಕರ್ ಅವರ ಮನೆಗೆ ಬೆಂಕಿ ನೀಡಿ ಅಂಗಡಿಯನ್ನು ಕೆಲ ದುಷ್ಕರ್ಮಿಗಳು ಜಖಂಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ. 

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂದಿಗೋಡು ಸುಧಾಕರ್, ಮಾಲತಿ ದಂಪತಿಗಳು ವಾಸವಿರುವ ಮನೆಗೆ ತೆರಳಿರುವ ದುಷ್ಕರ್ಮಿಗಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೆಂಕಿ ಹಚ್ಚಿ ಅಪಾರ ಬೆಲೆಬಾಳುವ ವಸ್ತುಗಳನ್ನು ನಾಶ ಮಾಡಿ ಅವರ ಅಂಗಡಿಯನ್ನು ದೋಚಿರುವ ಕುರಿತು ವರದಿಯಾಗಿದೆ. 

ಕುಟುಂಬಸ್ಥರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿದ್ದ ವೇಳೆಯಲ್ಲಿ ಈ ದುಷ್ಕೃತ್ಯ ನಡೆದಿದ್ದು ಅಂಗಡಿಯ ಮುಂದೆ ಮದ್ಯದ ಬಾಟಲ್ ಮತ್ತು ಕಲ್ಲಿನಿಂದ ಹೊಡೆದು ಅಂಗಡಿ ಜಖಂ ಮಾಡಿರುತ್ತಾರೆ ಹಾಗೂ ಮನೆಯ ಹಿಂಭಾಗದಲ್ಲಿ ನ ಕೊಟ್ಟಿಗೆಗೆ ಬೆಂಕಿ ಕೊಟ್ಟು ಅಲ್ಲಿ ರಿಸಿದ ಬೈಕನ್ನು ಸುಟ್ಟುಹಾಕಿ ಮನೆಗೆ ಬೆಂಕಿ ನೀಡಿರುತ್ತಾರೆ ಹಾಗೂ ಮನೆಯಲ್ಲಿನ ಅನೇಕ ವಸ್ತುಗಳನ್ನು ಹಾನಿ ಮಾಡಿದ್ದಾರೆ ಎಂದು ಮನೆಯವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಅವರು ಮನೆಯಲ್ಲಿನ ಅಪಾರ ಪ್ರಮಾಣದ ವಸ್ತುಗಳು ಯಾವುದೋ ದುಷ್ಕರ್ಮಿಗಳಿಂದ ಹಾನಿಯಾಗಿದ್ದು ಈ ಕುರಿತು ನ್ಯಾಯ ಒದಗಿಸುವಂತೆ ಹಾಗೂ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದ್ದಾರೆ. ಘಟನೆಯ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ