ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ರಾಷ್ಟ್ರ ನಿರ್ಮಾಣದಲ್ಲಿ ವ್ಯಕ್ತಿಗಳ ಪಾತ್ರ ಅತ್ಯಂತ ಮಹತ್ವದಾಗಿದ್ದು ರಾಷ್ಟ್ರೀಯತೆ ವಿಚಾರವನ್ನು ಅಳವಡಿಸಿಕೊಂಡಲ್ಲಿ ಮಾತ್ರ ಭಾರತ ವಿಶ್ವಗುರುವಾಗಲಿದೆ ಎಂದು ಬಿಜೆಪಿ ರಾಜ್ಯದ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಪ್ಪದಕಲ್ಲು ಸಮುದಾಯ ಭವನದಲ್ಲಿ ಮೂರು ದಿನಗಳ ಕಾಲ ನಡೆಯುವ ಜಿಲ್ಲಾ ಪ್ರಶಿಕ್ಷಣ ವರ್ಗವನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರು ಭಾರತೀಯರಾದ ನಾವುಗಳು ಆತ್ಮ, ದೇಹ, ಮನಸ್ಸು ಮತ್ತು ಬುದ್ದಿಯನ್ನು ವಿಕಸಿತಗೊಳಿಸಿಕೊಂಡು ಏಕಾತ್ಮವಾದವಾಗಿ ಬೆಳೆದಲ್ಲಿ ಭವ್ಯ ರಾಷ್ಟ್ರದ ನಿರ್ಮಾಣ ಬೆಳೆದಾಗ ಭವ್ಯ ಭಾರತದ ನಿರ್ಮಾಣ ಸಾದ್ಯ ಎಂಬುದು ಗೂರೂಜಿಯವರ ಅಶಯವಾಗಿತ್ತು, ಇದನ್ನು ಸಾಕಾರಗೊಳಿಸುವುದೇ ಬಿಜೆಪಿ ಕಾರ್ಯಕರ್ತರ ಮೂಲ ಧ್ಯೇಯ. ಇದನ್ನು ಅಭ್ಯಾಸ ಸ ವರ್ಗಗಳು ಸಾಕಾರಗೊಳಿಸುತ್ತದೆ ಎಂದರು.
ಉಕ್ರೇನ್ ನಿಂದ 22 ಸಾವಿರ ಭಾರತೀಯರನ್ನು ಕರೆ ತಂದ ವಿಶ್ವದ ಏಕೈಕ ದೇಶ ಭಾರತವಾಗಿದ್ದು ವಿಶ್ವವೇ ದಿಗ್ಬ್ರಮೆಯಿಂದ ನೋಡುತ್ತಿದ್ದು. ದೇಶ ಹೋಳು ಮಾಡುತ್ತಿದ್ದ ಆರ್ಟಿಕಲ್ 370 ರದ್ದುಗೊಳಿಸಿದ್ದಲ್ಲದೆ. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ, ದಿವ್ಯಕಾಶಿ ಭವ್ಯಕಾಶಿ ನಿರ್ಮಾಣ, ನಮಾಮಿಗಂಗೆ ಹೆಸರಲ್ಲಿ ಗಂಗಾನದಿ ಶುದ್ದಿಕರಣ, ಸೇರಿದಂತೆ ಅನೇಕ ಸಾಧನೆಗಳನ್ನು ಮೋದೀಜಿ ನೇತೃತ್ವದ ಸರ್ಕಾರ ಮಾಡಿದ್ದು ಮುಂಬರುವ ದಿನಗಳಲ್ಲಿ ದೇಶದ ಕುರಿತಾಗಿ ಇನ್ನಷ್ಟು ಕಾರ್ಯಗಳನ್ನು ಎಲ್ಲರೂ ಮಾಡಬೇಕಿದೆ ಎಂದರು.
ಸಂಸ್ಕಾರ ಸಿಕ್ಕಿದಾಗ ಮಾತ್ರ ವ್ಯಕ್ತಿತ್ವ ನಿರ್ಮಾಣ ಸಾದ್ಯ, ಪ್ರಶಿಕ್ಷಣ ವರ್ಗ ಇದನ್ನು ಕಲಿಸಿಕೊಡಲಿದ್ದು ಸಂಘಟನೆ ದೃಷ್ಟಿಯಿಂದ ಅಗತ್ಯವಾಗಿ ಎಲ್ಲರು ಪಕ್ಷ ಕಟ್ಟಲು ದುಡಿಯೋಣ ಎಂದರು. ವೇದಿಕೆಯಲ್ಲಿ ಶಾಸಕ ಎಂ.ಪಿ ಕುಮಾರಸ್ವಾಮಿ ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಗಣೇಶ್ ರಾಯರು, ಜಿಲ್ಲಾ ಕಾರ್ಯದರ್ಶಿ ದೇವರಾಜ್ ಉಪಸ್ಥಿತರಿದ್ದು. ಜಿಲ್ಲೆಯ ವಿವಿಧ ಮಂಡಲಗಳಿಂದ 120 ಕ್ಕೂ ಅಧಿಕ ಅಪೇಕ್ಷಿತ ಮುಖಂಡರು ಭಾಗವಹಿಸಿದ್ದರು.
ತನು ಕೊಟ್ಟಿಗೆಹಾರ, ವರದಿಗಾರರು

0 Comments