ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಕೊಪ್ಪದ ತಾಲೂಕು ಕಚೇರಿಯಲ್ಲಿ ಕಡತ ನಾಪತ್ತೆ ಪ್ರಕರಣದ ಆರೋಪಿ ಹಾಗೂ ಶೃಂಗೇರಿಯಲ್ಲಿ ನಡೆದ ನಕಲಿ ಹಕ್ಕುಪತ್ರ ವಿತರಣೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪ್ರಕಾಶ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಇದನ್ನೂ ಓದಿ : ಬಿಜೆಪಿ ನಾಯಕ, ಕೊಪ್ಪ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಜೆಡಿಎಸ್ ಸೇರ್ಪಡೆ
ಕೊಪ್ಪ ತಾಲೂಕು ಕಛೇರಿಯಲ್ಲಿ ಫಾರಂ ನಂ. 53, 57 ಕಡತ ಕಳ್ಳತನ ಮಾಡಿ, ನಂತರ ಕಾಸು ಕೊಟ್ಟವರಿಗಷ್ಟೆ ಕಡತವನ್ನು ಉಧ್ಭವ ಮಾಡಿ ನೀಡುತ್ತಿದ್ದ ಕಡತ ಕಳ್ಳ'ತನದ ಆರೋಪಿ ಪ್ರಕಾಶನ ಮೇಲೆ ಇತ್ತೀಚೆಗಷ್ಟೇ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಈಗ ಪೊಲೀಸರು ಪ್ರಕಾಶನನ್ನು ಬಂಧಿಸಿದ್ದು ಬಡವರ ಕಡತ ತಿಂದ ಹೆಗ್ಗಣ ಇನ್ನಾದರೂ ಹೊರ ಕಕ್ಕುತ್ತದೆಯಾ ನೋಡಬೇಕಿದೆ. ಇದರ ಜೊತೆಗೆ ಶೃಂಗೇರಿ ಬೋಗಸ್ ಹಕ್ಕುಪತ್ರ ಹಗರಣದಲ್ಲಿ ಸಹ ಪ್ರಕಾಶನ ಪಾತ್ರವಿದ್ದ ಕಾರಣ ಅಮಾನತು ಮಾಡಲಾಗಿತ್ತು.
ಖಚಿತ ಮಾಹಿತಿಯನ್ನು ಪಡೆದ ಕೊಪ್ಪ ಪೊಲೀಸರು ಪ್ರಕಾಶನ ಮನೆಯ ಮೇಲೆ ದಾಳಿ ಮಾಡಿ ಕೊಪ್ಪದ ಮನೆಯಲ್ಲಿದ್ದ ಪ್ರಕಾಶನನ್ನು ಬಂಧಿಸಿದ್ದಾರೆ. ಆತನನ್ನು ಕೊಪ್ಪದ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ
ಒಂದು ಫೋಟೋವಿನ ಕಥೆ : ಶೃಂಗೇರಿ ಹಕ್ಕುಪತ್ರ ಹಗರಣದಲ್ಲಿ ಅಂಬುಜಾ ಮತ್ತು ಟೀಂ ಬಂಧನವಾದ ನಂತರದಲ್ಲಿ ತಾನು ಪರಮ ಸಭ್ಯ, ತಾನು ಈ ಹಗರಣದಲ್ಲಿ ಭಾಗಿಯೇ ಇಲ್ಲ, ಛೋಟಾ ಸಹಿ ನನ್ನದೇ ಅಲ್ಲ ಎಂದು ಮೇಲಧಿಕಾರಿಗಳ ತನಿಖೆ ವೇಳೆ ಪೋಸು ಕೊಟ್ಟಿದ್ದ ಇದೇ ಪ್ರಕಾಶ ಆಟೋ ಚಾಲಕರಿಗೆ ಹಕ್ಕುಪತ್ರ ವಿತರಿಸುವಾಗ ತೆಗೆದ ಫೋಟೋಗೆ ಪೋಸ್ ನೀಡಿದ ಫೋಟೋವೊಂದು ಸುದ್ಧಿಯಾದ ಬಳಿಕ ಈತನ ಬಣ್ಣ ಬಯಲಾಗಿ ಸಸ್ಪೆಂಡ್ ಆಗಿದ್ದ. ಒಂದು ಫೋಟೋವಿನ ಕಥೆಯಿಂದಾಗಿ ಪ್ರಕಾಶನ ಬಣ್ಣ ಬಯಲಾಗಿತ್ತು.

0 Comments