ಹಾಸನ : (ನ್ಯೂಸ್ ಮಲ್ನಾಡ್ ವರದಿ) ಅಳಿವಿನಂಚಿನಲ್ಲಿರುವ ಮೌಸ್ ಡೀರ್ ಪ್ರಾಣಿಯನ್ನು ಮಾಂಸಕ್ಕಾಗಿ ಬೇಟೆಯಾಡಿದ ಮೂವರನ್ನು ಹಾಸನದ ಅರಣ್ಯ ಇಲಾಖಾ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಬರ್ಬರವಾಗಿ ಹತ್ಯೆಗೀಡಾಗಿದ್ದ ಬಜರಂಗದಳದ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಣೆ ಮಾಡಿದ ರಾಜ್ಯ ಸರ್ಕಾರ
ಕ್ಷೀಣಿಸುತ್ತಿರುವ ಸಾಲಿನಲ್ಲಿರುವ ಅಪರೂಪದ ಪ್ರಾಣಿಯಾದ ಮೌಸ್ ಡೀರ್ ನ್ನು (Mouse deer) ಬೇಟೆಯಾಡಿದ ಮೂವರನ್ನು ಬಂಧಿಸಿರುವ ಹಾಸನದ ಅರಣ್ಯ ಇಲಾಖೆಯ ಅಧಿಕಾರಿಗಳು ಆರೋಪಿಗಳಿಂದ ಮಾಂಸವನ್ನು ಹಾಗೂ ಬೇಟೆಗಾಗಿ ಬಳಸಿದ ಆಯುಧವನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಮಂಕನಹಳ್ಳಿಯ ಎ.ಎಸ್ ಸುಬ್ರಮಣ್ಯ, ಅತ್ತಿಹಳ್ಳಿಯ ಎಸ್.ಕೆ ಧರ್ಮೇಗೌಡ ಹಾಗೂ ಸಕಲೇಶಪುರ ತಾಲೂಕಿನ ಬೆಟ್ಟದಮನೆಯ ಬಿ.ಆರ್ ಸುರೇಶ್ ಎಂದು ಗುರುತಿಸಲಾಗಿದೆ.
ಈ ಕಾರ್ಯಾಚರಣೆಯು ಅರಣ್ಯ ಉಪ ಸಂರಕ್ಷಣಾಧಿಕಾರಿ ಕೆ.ಎನ್.ಬಸವರಾಜ್ ಮತ್ತು ಅರಣ್ಯಾಧಿಕಾರಿ ನರಸಿಂಹಮೂರ್ತಿ ನೇತೃತ್ವದ ತಂಡವು ಸೆರೆ ಹಿಡಿದಿದ್ದು ಆರೋಪಿಗಳ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ ದನದ ಕೊಟ್ಟಿಗೆಯಲ್ಲಿ ಇಟ್ಟಿದ್ದ 9.5 ಕೆಜಿ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

0 Comments