ಜಯಪುರ : (ನ್ಯೂಸ್ ಮಲ್ನಾಡ್ ವರದಿ) ಇನ್ನೇನು ಒಂದು ವರ್ಷದ ಆಸುಪಾಸಿನಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ತಮ್ಮ ಪಕ್ಷ ಸಂಘಟನೆಯ ಕುರಿತಾಗಿ ಈಗಿನಿಂದಲೇ ಸಜ್ಜಾಗುತ್ತಿದ್ದಾರೆ. ಅಂತೆಯೇ ಜಯಪುರ ಕೊಪ್ಪ ಭಾಗದ ಪ್ರಮುಖ ಬಿಜೆಪಿ ನಾಯಕರಾದ ಉದಯ್ ಬಿಜೆಪಿ ತೊರೆದು ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡರು.
ಇದನ್ನೂ ಓದಿ : ಪಿ.ಎಫ್ ಹಣವನ್ನೂ ಕಟ್ಟದೆ ಅನ್ಯಾಯ, ಸಹಕಾರ ಸಾರಿಗೆ ಎಂ.ಡಿ ಅಂದರ್: ಇನ್ನಾದರೂ ಕಾರ್ಮಿಕರ ಹೋರಾಟಕ್ಕೆ ಸಿಗುತ್ತಾ ನ್ಯಾಯ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಎದುರಾಗುವ ಎಲ್ಲಾ ಸನ್ನಿವೇಶಗಳು ಇದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ, ಹೀಗಿರುವಾಗ ಜಯಪುರ, ಹೇರೂರು ಭಾಗದ ಪ್ರಮುಖ ಬಿಜೆಪಿ ನಾಯಕರಾದ ಹಾಗೂ ಕೊಪ್ಪ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಉದಯ್ ಅವರ ಬೆಂಬಲಿಗರ ಜೊತೆಗೆ ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡರು.
ಕೊಪ್ಪದಲ್ಲಿ ನಡೆದ ಜೆಡಿಎಸ್ ಸಂಘಟನಾ ಪರ್ವ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಅವರು ಚಿಕ್ಕಮಗಳೂರು ಜಿಲ್ಲೆಯ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷರಾಗಿದ್ದರು. ಕೊಪ್ಪದ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ ಎರಡೂವರೆ ವರ್ಷ ಕಾರ್ಯ ನಿರ್ವಹಿಸಿದ್ದರು. ಬಿಜೆಪಿಯ ಪ್ರಮುಖ ನಾಯಕರ ವರ್ತನೆಗೆ ಬೇಸರಗೊಂಡು ಜೆಡಿಎಸ್ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದರು.
ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಭಾಗದಲ್ಲಿ ಈಗಾಗಲೇ ಮೂರೂ ಪಕ್ಷಗಳು ಚುನಾವಣಾ ತಯಾರಿಯನ್ನು ಆರಂಭಿಸಿ ಪಕ್ಷಗಳ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಅನೇಕರು ಈಗಾಗಲೇ ದಾಟುತ್ತಿದ್ದಾರೆ. ಉದಯ್ ಅವರೊಂದಿಗೆ ಜಯಪುರ, ಶಾಂತಿಪುರ,ಹೇರೂರು,ಅಡ್ಡಗದ್ದೆ ಭಾಗದ ನೂರಾರು ಕಾರ್ಯಕರ್ತರು ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡರು.

0 Comments