ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಹರಿಹರಪುರ ಶ್ರೀಮಠದಲ್ಲಿ ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಮಹಾಕುಂಭಾಭಿಷೇಕದ ಸಲುವಾಗಿ ನಡೆಯಬೇಕಾದ ತಯಾರಿಗಳ ಕುರಿತು ಹಾಗೂ ಈ ಕುಂಭಾಭಿಷೇಕವನ್ನು ಯಶಸ್ವಿಗೊಳಿಸುವ ಕುರಿತಾಗಿ ಪೂರ್ವಭಾವಿ ಸಭೆ ಜರುಗಿತು. ಈ ಸಭೆಯಲ್ಲಿ ಅನೇಕರು ಪಾಲ್ಗೊಂಡು ಸವಿಸ್ತಾರವಾದ ಚರ್ಚೆಯನ್ನು ನಡೆಸಿದರು.
ಇದನ್ನೂ ಓದಿ : ಕಡೂರು : ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ಸೆರೆ ಹಿಡಿದ ಪೊಲೀಸರು
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಶ್ರೀ ಮಠದಲ್ಲಿ ಏಪ್ರಿಲ್ 10 ನೇ ತಾರೀಖಿನಿಂದ 24 ರ ವರೆಗೆ ಆಯೋಜನೆಗೊಂಡಿರುವ ಮಹಾಕುಂಭಾಭಿಷೇಕದ ತಯಾರಿ ಹಾಗೂ ಈ ಕುರಿತು ಮಾಡಬೇಕಾಗಿರುವ ಕಾರ್ಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಮಹಾ ಕುಂಭಾಭಿಷೇಕದ ಅಂಗವಾಗಿ ಹರಿಹರಪುರ ಶ್ರೀ ಮಠದ ಆವರಣದ ಸುತ್ತ ಕಾವಡಿ ಗ್ರಾಮದ ವತಿಯಿಂದ ಶ್ರಮದಾನ ಕಾರ್ಯಕ್ರಮ ಇಂದು ನಡೆಯಿತು. ಈ ಶ್ರಮದಾನ ಕಾರ್ಯಕ್ರಮದಲ್ಲಿ ಕಾವಡಿ ಗ್ರಾಮಸ್ಥರು ಮತ್ತು ಸ್ವಯಂ ಸೇವಕರು ಪಾಲ್ಗೊಂಡು ಶ್ರಮದಾನ ನಡೆಸಿದರು.
ಈ ಸಭೆಯ ಅಧ್ಯಕ್ಷತೆಯನ್ನು ಹೊರನಾಡಿನ ಶ್ರೀ ಅನ್ನಪೂರ್ಣೆಯ ದೇವಸ್ಥಾನದ ಧರ್ಮಕರ್ತ ಡಾ. ಭೀಮೇಶ್ವರ ಜೋಷಿ ಅವರು ವಹಿಸಿದ್ದರು. ಈ ಕುರಿತು ಮಾತನಾಡಿದ ಅವರು ಅತ್ಯಂತ ಯಶಸ್ವಿಯಾಗಿ ಧಾರ್ಮಿಕತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ ಈ ಮಹಾ ಕುಂಭಾಭಿಷೇಕವನ್ನು ಯಶಸ್ವಿಗೊಳಿಸುವುದು ಎಲ್ಲಾ ಸಮಿತಿಗಳ ಜವಾಬ್ದಾರಿಯಾಗಿದೆ. ಜವಾಬ್ದಾರಿಯನ್ನು ಹೊಂದಿರುವ ಎಲ್ಲಾ ಭಕ್ತರು ಸೇವಾ ಮನೋಭಾವದಿಂದ ಮಹಾ ಕುಂಭಾಭಿಷೇಕದ ಯಶಸ್ಸಿಗೆ ಕಾರಣೀಕರ್ತರಾಗಬೇಕು ಎಂದರು.
ಈ ಸಭೆಯಲ್ಲಿ ಅನೇಕ ಸಮಿತಿಗಳನ್ನು ರಚಿಸಿ ಸಮಿತಿಗಳ ಕಾರ್ಯವೈಖರಿಯ ಬಗ್ಗೆ ಹಾಗೂ ಸಮಿತಿ ಮುಖ್ಯಸ್ಥರನ್ನು ನೇಮಕ ಮಾಡಿ ಆಯಾಯ ಸಮಿತಿಗಳ ಜವಾಬ್ದಾರಿಯನ್ನು ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಶ್ರೀಗಳ ಆಪ್ತ ಸಹಾಯಕ ರಘುನಾಥ ಶಾಸ್ತ್ರಿ ವ್ಯವಸ್ಥಾಪಕ ಕೃಷ್ಣಭಟ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಭಟ್ ಸೇರಿದಂತೆ ಅನೇಕರು ಈ ಸಭೆಯ ವೇಳೆಯಲ್ಲಿ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ಸಲಹೆಗಳನ್ನು ತಿಳಿಸಿದರು.

0 Comments