ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಿನ ಅಡಿಷನಲ್ ಎಸ್ಪಿ ಎನ್.ಎಸ್ ಶೃತಿ ಅವರು ವಿಶ್ವ ಶಾಂತಿಪಾಲನಾ ಪಡೆಯಲ್ಲಿ ಕಾರ್ಯ ನಿರ್ವಹಣೆ ಮಾಡಲು ಆಯ್ಕೆಯಾಗಿದ್ದಾರೆ. 

ಮೂಲತಃ ಮಡಿಕೇರಿಯವರಾದ ಶೃತಿ ಅವರು ಅನೇಕ ವರ್ಷಗಳಿಂದ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ, ದಕ್ಷ ಹಾಗೂ ಪ್ರಾಮಾಣಿಕವಾಗಿ ಪ್ರಚಾರ ಬಯಸದೇ ಎಲ್ಲೆಡೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಶೃತಿ ಅವರದ್ದು. ಪ್ರಸ್ತುತ ವಿಶ್ವ ಶಾಂತಿಪಾಲನಾ ಪಡೆಗೆ ಶೃತಿ ಅವರು ಆಯ್ಕೆಯಾಗಿದ್ದಾರೆ. ಇಡೀ ದೇಶದಿಂದ ಆಯ್ಕೆಯಾದ 69 ಜನ ಪೊಲೀಸರಲ್ಲಿ ಅಡಿಷನಲ್ ಎಸ್ಪಿ ಎನ್.ಎಸ್ ಶೃತಿ ಹಾಗೂ ಎಸಿಪಿ ಜಗದೀಶ್ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿಶ್ವ ಶಾಂತಿಪಾಲನಾ ಪಡೆಗೆ ಆಯ್ಕೆಯಾಗಲು  ನಡೆಯುವ ಪರೀಕ್ಷೆ ಹಾಗೂ ಸಂದರ್ಶನವನ್ನು ಅತ್ಯುತ್ತಮವಾಗಿ ಈ ಇಬ್ಬರೂ ಅಧಿಕಾರಿಗಳು ನಿರ್ವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಅನೇಕ ಸಮಯಗಳಿಂದ ವಿಶ್ವ ಶಾಂತಿ ಪಾಲನಾ ಪಡೆ ಕಾರ್ಯ ನಿರ್ವಹಿಸುತ್ತಿದ್ದು ಈ ಪಡೆಯಲ್ಲಿ ಚಿಕ್ಕಮಗಳೂರಿನ ಅಡಿಷನಲ್ ಎಸ್ಪಿ ಶೃತಿ ಆಯ್ಕೆಗೊಂಡಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಅನೇಕ ಕಡೆಗಳಿಂದ ಜನರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ಸರಿಯಾದ ಮಾರ್ಗದಲ್ಲಿ ಮುನ್ನಡೆದು ದೇವರು ಕೊಟ್ಟ ಅವಕಾಶವನ್ನು ಬಳಸಿಕೊಳ್ಳಬೇಕು. ನಾನು, ನನ್ನಿಂದ ಎನ್ನುವುದು ಏನು ಇಲ್ಲ, ಸರಿಯಾದ ಮಾರ್ಗದಲ್ಲಿ ನಡೆದರೆ ಎಲ್ಲವೂ ಅತ್ಯಂತ ಪ್ರಭಾವಶಾಲಿಯಾಗಲಿದೆ ಎಲ್ಲರೂ ಶಕ್ತಿಯುತರಾಗುತ್ತಾರೆ - ಅಡಿಷನಲ್ ಎಸ್ಪಿ ಎನ್.ಎಸ್ ಶೃತಿ

ಕೆಲಸದ ಮೇಲೆ ಅಗಾಧವಾದ ಗೌರವ ಹೊಂದಿರುವ ASP ಶೃತಿ ಅವರು ಸದಾ ಕ್ರಿಯಾಶೀಲ ಹಾಗೂ ಪ್ರಾಮಾಣಿಕ ಕೆಲಸಗಳಲ್ಲಿ ಭಾಗಿಯಾಗಿರುತ್ತಾರೆ ಯಾವುದೇ ಪ್ರಚಾರ ಬಯಸದೆ ಸದಾ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ದಕ್ಷ ಅಧಿಕಾರಿ ಶೃತಿ ಅವರಿಗೆ ಇನ್ನಷ್ಟು ಹೆಚ್ಚಿನ ಯಶಸ್ಸು ಲಭಿಸಲಿ.