ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಮುಸ್ಲಿಂ ಯುವಕನ ಪ್ರೀತಿಯ ಬಲೆಗೆ ಬಿದ್ದು ಮದುವೆಯಾಗಿದ್ದ ಹಿಂದೂಯುವತಿ ಡೆಲಿವರಿ ಆದ ಐದನೇ ದಿನಕ್ಕೆ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಅಕ್ರಮ ಗೋಮಾಂಸ ಮಾರಾಟ ನಡೆಸುತ್ತಿದ್ದ ಹೋಟೆಲ್ ಮೇಲೆ ನಗರಸಭೆ ಅಧಿಕಾರಿಗಳ ದಾಳಿ


ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದ ನಿವಾಸಿಯಾದ ಭೂಮಿಕಾ ತನ್ನ ಪೋಷಕರನ್ನು ಎರಡು ವರ್ಷದ ಹಿಂದೆ ಕಳೆದುಕೊಂಡಿದ್ದಳು, ನಂತರದಲ್ಲಿ ಆಕೆಯ ಅಜ್ಜಿಯ ಮನೆಯಲ್ಲಿದ್ದುಕೊಂಡು ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ. ಈ ಮಧ್ಯೆ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಸಮೀರ್ ಎಂಬ ಮುಸ್ಲಿಂ ಯುವಕನ ಪರಿಚಯವನ್ನು ಯುವತಿ ಬೆಳೆಸಿದ್ದಾಳೆ ನಂತರದಲ್ಲಿ ಇದು ಪ್ರೇಮಕ್ಕೆ ತಿರುಗಿದ್ದು ಅಪ್ರಾಪ್ತ ವಯಸ್ಸಿನಲ್ಲೇ ಭೂಮಿಕಾ ಸಮೀರ್ ನನ್ನು ಮದುವೆಯಾಗಿದ್ದಾಳೆ ನಂತರದಲ್ಲಿ ಸಮೀರ್ ಆಕೆಯ ಹೆಸರನ್ನು ಮುಸ್ಕಾನ್ ಬಾನು ಎಂದು ಬದಲಾಯಿಸಿದ್ದಾನೆ


ಮದುವೆಯಾದ ನಂತರ ಭೂಮಿಕಾಳಿಗೆ ಆಕೆಯ ಕುಟುಂಬ ವರ್ಗದವರೊಂದಿಗೆ ಬೆರೆಯಲು ಅವಕಾಶ ನೀಡುತ್ತಿರಲಿಲ್ಲ ಎಂದು ಮೃತ ಭೂಮಿಕಾ ಕುಟುಂಬಸ್ಥರು ಆರೋಪ ಮಾಡಿದ್ದಾರೆ ಇದಲ್ಲದೆ ಸಮೀರ್ ಜೊತೆಗೆ ಆತನ ತಾಯಿ ಹಾಗೂ ಸಹೋದರಿಯರೂ ಕಿರುಕುಳ ನೀಡುತ್ತಿದ್ದರು ಎಂದು ದೂರಿದ್ದಾರೆ. 

ಗರ್ಭಿಣಿಯಾಗಿದ್ದ ಮುಸ್ಕಾನ್ ಬಾನುವನ್ನು (ಭೂಮಿಕಾ) ಹೆರಿಗೆಗಾಗಿ ಸೊರಬದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಹೆರಿಗೆಯ ನಂತರದಲ್ಲಿ ಆಕೆಗೆ ತೀವ್ರ ರಕ್ತಸ್ರಾವವಾಗಿತ್ತು ಮತ್ತು ಈ ಸಲುವಾಗಿ ಹೆಚ್ಚಿನ ಚಿಕಿತ್ಸೆ ಬೇಕಾಗಿದ್ದರಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡುವಂತೆ ವೈದ್ಯರು ಸೂಚಿಸಿದ್ದರು ಅಂತೆಯೇ ಮೆಗ್ಗಾನ್ ಗೆ ದಾಖಲು ಮಾಡಿದಾಗ ಅಲ್ಲೂ ಕೂಡ ತುರ್ತಾಗಿ ಭೂಮಿಕಾಳಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದೆ ಮಂಗಳೂರಿಗೆ ದಾಖಲು ಮಾಡುವಂತೆ ವೈದ್ಯರು ಸೂಚಿಸಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭಿಸದೇ ಭೂಮಿಕಾ ಕೊನೆಯುಸಿರೆಳೆದಿದ್ದಾಳೆ.

ಇತ್ತಾ ಭೂಮಿಕ ಮೃತಪಟ್ಟಿರುವ ವಿಚಾರವನ್ನು ಆಕೆಯ ಕುಟುಂಬಸ್ಥರಿಗೆ ತಿಳಿಸದೆ ಸಮೀರ್ ಮುಚ್ಚಿಟ್ಟಿದ್ದ, ಈ ವಿಷಯ ತಿಳಿಯುತ್ತಿದ್ದಂತೆ ಸಮೀರ್ ಕುಟುಂಬದ ವಿರುದ್ಧ ದೂರು ನೀಡಿರುವ ಭೂಮಿಕಾ ಕುಟುಂಬಸ್ಥರು. ಈ ಸಾವಿಗೆ ಸಮೀರ್ ಕುಟುಂಬಸ್ಥರೇ ಕಾರಣ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.