ಸೊರಬ : (ನ್ಯೂಸ್ ಮಲ್ನಾಡ್ ವರದಿ) ಬೈಕ್ ಹಾಗೂ ತರಕಾರಿ ಸಾಗಿಸುವ ವಾಹನದ ನಡುವೆ ಭೀಕರವಾಗಿ ಅಪಘಾತ ಸಂಭವಿಸಿದ್ದು ಇಬ್ಬರು ದುರ್ಮರಣ ಹೊಂದಿದ ಘಟನೆ ವರದಿಯಾಗಿದೆ. 

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕರ್ನಲ್ಲಿ ಗ್ರಾಮದ 35 ವರ್ಷ ಪ್ರಾಯದ ಭರಮಗೌಡ ಚಂದ್ರಪ್ಪ ಹಾಗೂ ರುದ್ರಗೌಡ ಮಲ್ಲೇಶಗೌಡ ಎಂಬ 50 ವರ್ಷ ಪ್ರಾಯದ ವ್ಯಕ್ತಿಗಳು ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 

ತರಕಾರಿ ಸಾಗಿಸುವ ವಾಹನ ಹಾಗೂ ಬೈಕ್ ನ ನಡುವೆ ನಡೆದ ಈ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಶಿರಾಳಕೊಪ್ಪ ಮಾರ್ಗವಾಗಿ ಸಾಗರಕ್ಕೆ ತರಕಾರಿ ಸಾಗಾಟ ನಡೆಸುತ್ತಿದ್ದ ತರಕಾರಿ ವಾಹನ ಹಾಗೂ ಬೈಕ್ ನಡುವೆ ನಡೆದ ಈ ಅಪಘಾತ ಇಬ್ಬರನ್ನು ಬಲಿ ಪಡೆದಿದೆ. 

ಕುಟುಂಬ ವರ್ಗದವರನ್ನು ಅಪಘಾತದಲ್ಲಿ ಕಳೆದುಕೊಂಡ ಕುಟುಂಬದವರು ಅತೀವ ಬೇಸರವನ್ನು ವ್ಯಕ್ತಪಡಿಸಿದ್ದಾರೆ.