ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಅಂಗನವಾಡಿಯಲ್ಲಿ ಪುಟಾಣಿ ಮಕ್ಕಳೊಂದಿಗೆ ಪುನೀತ್ ರಾಜಕುಮಾರ್ ಅವರ ಜನ್ಮದಿವನ್ನು ಅಂಗನವಾಡಿ ಕಾರ್ಯಕರ್ತೆಯರು ಆಚರಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಪೇಟೇಕೆರೆ ಅಂಗನವಾಡಿಯಲ್ಲಿ ಪುಟಾಣಿ ಮಕ್ಕಳೊಂದಿಗೆ ಅಪ್ಪುವಿನ ಜನ್ಮದಿನಾಚರಣೆಯನ್ನು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಅಂಗನವಾಡಿ ಕಾರ್ಯಕರ್ತೆಯರು ಆಚರಿಸಿದ್ದಾರೆ. ಈ ಕುರಿತು ಸದಾ ನೆನಪಿನಲ್ಲಿರುವಂತೆ ಫ್ಯಾನ್ ಒಂದನ್ನು ನೆನಪಿನ ಕಾಣಿಕೆಯ ರೀತಿಯಲ್ಲಿ ಅಂಗನವಾಡಿಗೆ ನೀಡಲಾಗಿದೆ.

ಇದನ್ನೂ ಓದಿ : ಕಾಂಗ್ರೆಸ್ ಡಿಜಿಟಲ್ ಮೆಂಬರ್ಶಿಪ್ ನಲ್ಲಿ ಭಾರೀ ಹಿನ್ನೆಡೆ. ಶಾಸಕ ರಾಜೇಗೌಡ, ಮೋಟಮ್ಮ ವಿರುದ್ಧ ಡಿ. ಕೆ ಶಿವಕುಮಾರ್ ಗರಂ

ಎಲ್ಲರ ಮನಸ್ಸಿನಲ್ಲಿ ಇಂದಿಗೂ ಹಾಸುಹೊಕ್ಕಾಗಿರುವ ಪುನೀತ್ ರಾಜಕುಮಾರ್ ಅವರ ನೆನಪುಗಳನ್ನು ಮರೆಯಲು ಕಷ್ಟ ಸಾಧ್ಯ ಅವರನ್ನು ಎಂದಿಗೂ ಕರುನಾಡು ಮರೆಯುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ರಮ್ಯಾ, ವಿಜಯಲಕ್ಷ್ಮಿ, ಹಾಗೂ ಪೇಟೇಕೆರೆ ದೊಡ್ಮನೆ ಕುಟುಂಬವರ್ಗದವರು ಭಾಗವಹಿಸಿದ್ದರು.