ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ ) ಕನ್ನಡದ ಶ್ರೇಷ್ಠ ನಟ ಅಭಿಮಾನಿಗಳ ಆರಾಧ್ಯ ದೈವ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ರಾಜ್ಯಾದ್ಯಂತ ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸಿದ್ದಾರೆ ಅಂತೆಯೇ ಚಿಕ್ಕಮಗಳೂರಿನ ವಿಜಯಪುರದಲ್ಲಿ ಪುನೀತ್ ರಾಜಕುಮಾರ್ ಗೆಳೆಯರ ಬಳಗದ ವತಿಯಿಂದ ಪುನೀತ್ ರಾಜಕುಮಾರ್ ಭಾವಚಿತ್ರದ ಧ್ವಜ ಕಟ್ಟೆಯ ಉದ್ಘಾಟನಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಚಿಕ್ಕಮಗಳೂರು ನಗರದ ವಿಜಯಪುರದಲ್ಲಿ ಪುನೀತ್ ರಾಜಕುಮಾರ್ ಗೆಳೆಯರ ಬಳಗದ ವತಿಯಿಂದ ಆಯೋಜನೆ ಮಾಡಲಾಗಿದ್ದ ಪುನೀತ್ ರಾಜಕುಮಾರ್ ಅವರ ಭಾವಚಿತ್ರ ಹೊಂದಿರುವ ಧ್ವಜ ಕಟ್ಟೆಯನ್ನು ಚಿಕ್ಕಮಗಳೂರು ನಗರಸಭಾ ಅಧ್ಯಕ್ಷರಾದ ಶ್ರೀ ವರಸಿದ್ಧಿ ವೇಣುಗೋಪಾಲ್ ಅವರು ಉದ್ಘಾಟನೆ ಮಾಡಿದರು.  ನಂತರದಲ್ಲಿ ಮಾತನಾಡಿದ ಅವರು ಅಪ್ಪು ಬಾಲ್ಯದಲ್ಲೇ ಅಗಾಧವಾದ ಸಾಧನೆಯನ್ನು ಮಾಡಿದ್ದಾರೆ ಇಡೀ ಸಮಾಜಕ್ಕೆ ಅವರು ಓರ್ವ ಮಾದರಿ ವ್ಯಕ್ತಿ ಅವರು ನಡೆಸಿದ ಜೀವನದ ಹಾದಿ ಎಲ್ಲಾ ವಯಸ್ಸಿನವರಿಗೆ ಆಶಾದಾಯಕ, ಆ ಹೆಜ್ಜೆಗಳ ಹಿಂದೆ ನಾವು ಸಾಗಬೇಕು ಎಂದರು.

ಈ ಕುರಿತು ಮಾತನಾಡಿದ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್ ಯುವಕರಿಗೆ ಆದರ್ಶ ಪ್ರಾಯವಾಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಂದು ನಮ್ಮೊಡನೆ ಇಲ್ಲ ಆದರೆ ಅವರು ಬದುಕಿದ ಹಾದಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಆದರ್ಶಪ್ರಾಯವಾಗಿದೆ ಎಂದರು. ಯುವ ಸಮಾಜಕ್ಕೆ ಅಪ್ಪು ಹಾಕಿಕೊಟ್ಟ ಹಾದಿ ಅವರು ನೀಡಿದ ಮಾರ್ಗದರ್ಶನ ಉದತ್ತವಾದದ್ದು ಈ ಕುರಿತು ಎಲ್ಲರೂ ಹೆಚ್ಚಿನ ಗಮನಹರಿಸಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸಂತೋಷ್ ಕೋಟ್ಯಾನ್, ಚಂದ್ರು, ಪ್ರವೀಣ್ ಕುಮಾರ್, ಟೋನಿ, ಆನಂದ್, ಯೋಗೀಶ್ ಸೇರಿದಂತೆ ಪುನೀತ್ ರಾಜಕುಮಾರ್ ಅಭಿಮಾನಿಗಳು ಹಾಜರಿದ್ದರು.