ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಈ ಹಿಂದೆ ಕಾಶ್ಮೀರದಲ್ಲಿ ಹಿಮಗಡ್ಡೆಯಲ್ಲಿ ಸಿಲುಕಿ ಹುತಾತ್ಮ ನಾಗಿದ್ದ ಕೊಡಗಿನ ಯೋಧ ಅಲ್ತಾಫ್ ಅಹಮದ್ ಅವರ ಮನೆಗೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದರು.

ಇದನ್ನೂ ಓದಿ : ಸಾಲಬಾಧೆ ತಾಳಲಾರದೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮಹಿಳೆ

ಕೊಡಗು ಜಿಲ್ಲೆಯ ವಿರಾಜಪೇಟೆ ಸಮೀಪದಲ್ಲಿರುವ ಹುತಾತ್ಮ ಯೋಧ ಅಲ್ತಾಫ್ ಅಹಮದ್ ಅವರ ಮನೆಗೆ ಇಂದು ಮೈಸೂರು - ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಮೃತ ಯೋಧನ ಪತ್ನಿ ಹಾಗೂ ಮಕ್ಕಳಿಗೆ ಸಾಂತ್ವನ ಹೇಳಿದರು. 

ಅತಿಶೀಘ್ರವಾಗಿ ಕುಟುಂಬಕ್ಕೆ ಸರ್ಕಾರದ ವತಿಯಿಂದ ತಲುಪಬೇಕಾದ ಸವಲತ್ತನ್ನು ತಲುಪಿಸುವುದಾಗಿ ಭರವಸೆ ನೀಡಿದರು ಹಾಗೂ ಈ ಕುರಿತು ನಿಗಾವಹಿಸುವಂತೆ ಕೊಡಗು ಜಿಲ್ಲಾಧಿಕಾರಿಯವರಿಗೆ ಸಂಸದ ಪ್ರತಾಪ್ ಸಿಂಹ ಸೂಚಿಸಿದರು. ದುಃಖದಲ್ಲಿರುವ ಕುಟುಂಬಕ್ಕೆ ಧನಸಹಾಯವನ್ನು ಮಾಡಿದರು. 

ಸಂಸದ ಪ್ರತಾಪ್ ಸಿಂಹ ಅವರು ಶಿವಮೊಗ್ಗದಲ್ಲಿ ಹತ್ಯೆಯಾದ ಬಜರಂಗದಳದ ಕಾರ್ಯಕರ್ತನ ಮನೆಗೆ ಭೇಟಿ ನೀಡಿದ್ದಾರೆ ಆದರೆ ದೇಶಕ್ಕಾಗಿ ಮಡಿದ ವೀರಯೋಧನ ಕುಟುಂಬಕ್ಕೆ ಸಾಂತ್ವಾನ ಹೇಳಿಲ್ಲ ಎಂದು ಅನೇಕರು ಸಂಸದರನ್ನು ಟೀಕೆಗೆ ಗುರಿ ಮಾಡಿದ್ದರು.