ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ತಾಲ್ಲೂಕು ಕಚೇರಿಯಲ್ಲಿ ನಡೆದ ನಕಲಿ ಹಕ್ಕುಪತ್ರಗಳ ಹಗರಣದಲ್ಲಿ ಭಾಗಿಯಾಗಿದ್ದ ಆರೋಪ ಕೇಳಿಬಂದಿದ್ದ ತಹಶೀಲ್ದಾರ್ ಅಂಬುಜಾ ಮೇಲೆ ಇದೀಗ ಅರಣ್ಯ ಇಲಾಖೆಯು ಪ್ರಕರಣ ದಾಖಲು ಮಾಡಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆಯಲ್ಲಿ ಸಾರ್ವಜನಿಕರಿಂದ ಹಣ ಪಡೆದು, 94ಸಿ 94ಸಿಸಿ ಅಡಿಯಲ್ಲಿ ನಡೆದ ಬೋಗಸ್ ಹಕ್ಕುಪತ್ರ ವಿತರಣಾ ಕಾರ್ಯದಲ್ಲಿ ಭಾಗಿಯಾಗಿದ್ದ ಆರೋಪ ಹೊಂದಿದ್ದ ಶೃಂಗೇರಿ ತಹಸೀಲ್ದಾರ್ ಅಂಬುಜಾ ಮೇಲೆ ಇದೀಗ ಅರಣ್ಯ ಇಲಾಖೆಯೂ ಪ್ರಕರಣ ದಾಖಲು ಮಾಡಿದೆ.
ಶೃಂಗೇರಿಯಲ್ಲಿ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಶೃಂಗೇರಿ ವಿದ್ಯಾರಣ್ಯಪುರ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮನೆಗಳನ್ನು ಸಕ್ರಮಗೊಳಿಸಿದ್ದರು, ಅವರು ಸಕ್ರಮಗೊಳಿಸಿರುವ ಮನೆಗಳಲ್ಲಿ ಅರಣ್ಯ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಈ ಕುರಿತಾಗಿ ಅರಣ್ಯ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆ ತಹಸೀಲ್ದಾರ್ ಅಂಬುಜಾ ನೀಡಿರುವ 94ಸಿ 94ಸಿಸಿ ಅಡಿಯಲ್ಲಿನ ಹಕ್ಕುಪತ್ರಗಳು ಸೊಪ್ಪಿನಬೆಟ್ಟ, ಡೀಮ್ಡ್ ಫಾರೆಸ್ಟ್ ಸೇರಿದಂತೆ ಅನೇಕ ಅನಧಿಕೃತ ಜಾಗಗಳಲ್ಲೂ ಹಣ ಪಡೆದು ಬೋಗಸ್ ಹಕ್ಕುಪತ್ರ ವಿತರಣೆ ಮಾಡಿದ ಆರೋಪ ತಹಸೀಲ್ದಾರ್ ಅಂಬುಜಾ ಮೇಲಿದೆ. ಅಂತೆಯೇ ಶೃಂಗೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ಅಂಬುಜಾ ಹಾಗೂ ಗ್ರಾಮ ಲೆಕ್ಕಿಗ ಸಿದ್ದಪ್ಪ ಅವರ ಮೇಲೆ ದಾಳಿ ನಡೆಸಿ ವಿಚಾರಣೆಗಾಗಿ ವಶಕ್ಕೆ ಹಾಗೂ ನ್ಯಾಯಾಂಗ ಬಂಧನಕ್ಕೂ ತಹಸೀಲ್ದಾರ್ ಒಳಗಾಗಿದ್ದರು.






0 Comments